ಕೊಡಗಿನಲ್ಲಿ ರೈಲ್ವೇ ಲೈನ್ ಪರ ರಾಜ್ಯ ಸರ್ಕಾರವಿಲ್ಲ : ದೇಶಪಾಂಡೆ

ಬೆಂಗಳೂರು : ತಾತ್ವಿಕವಾಗಿ ರಾಜ್ಯ ಸರ್ಕಾರ ಕೊಡಗು ಮೂಲಕ ಮೈಸೂರು-ತಲಶೇರಿ ರೈಲ್ವೇ ಲೈನ್ ಪರ ವಹಿಸಿಲ್ಲ. ಪ್ರಸ್ತಾವಿತ ಈ ಯೋಜನೆಗೆ ಜಿಲ್ಲೆಯಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ.

ಬಿಜೆಪಿ ಸದಸ್ಯ ಬೋಪಯ್ಯ ಅಸೆಂಬ್ಲಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಆರ್ ವಿ ದೇಶಪಾಂಡೆ ಈ ವಿಷಯ ಸ್ಪಷ್ಟಪಡಿಸಿದರು.

ಈ ಯೋಜನೆಯ ಹಿನ್ನೆಲೆಯಲ್ಲಿ ಸರ್ಕಾರ ಸಾರ್ವಜನಿಕ ಅಭಿಪ್ರಾಯ ತಿಳಿದುಕೊಂಡಿದೆ. ಅರಣ್ಯ ಪ್ರದೇಶಕ್ಕೆ ಧಕ್ಕೆ ಉಂಟು ಮಾಡಲಿರುವ ಈ ಯೋಜನೆ, ಮುಖ್ಯವಾಗಿ ಆನೆ ಕಾರಿಡಾರಿಗೆ ಸಮಸ್ಯೆಯೊಡ್ಡಲಿದೆ ಎಂದು ಅರಣ್ಯ ಇಲಾಖೆಯೂ ವಿರೋಧ ವ್ಯಕ್ತಪಡಿಸಿದೆ ಎಂದರು.

ಈ ವಿವಾದಾಸ್ಪದ ರೈಲ್ವೇ ಲೈನಿನ ಸಮಗ್ರ ಪ್ರಾಜೆಕ್ಟ್ ವರದಿ ಸಿದ್ಧತೆಗೆ ಕರ್ನಾಟಕ ಸರ್ಕಾರ ಅವಕಾಶ ಕಲ್ಪಿಸುವುದಿಲ್ಲ ಎಂದವರು ಸದನಕ್ಕೆ ಭರವಸೆ ನೀಡಿದರು.

“ಈ ಪ್ರಸ್ತಾವದ ಬಗ್ಗೆ ಕೇರಳ ಸರ್ಕಾರದಿಂದ ಅಥವಾ ಅಧಿಕಾರಿಗಳಿಂದ ನಮಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ” ಎಂದು ದೇಶಪಾಂಡೆ ಹೇಳಿದರು.

6,685 ಕೋಟಿ ರೂ ಅಂದಾಜು ವೆಚ್ಚದ ಮೈಸೂರು-ತಲಶೇರಿ ರೈಲ್ವೇ ಲೈನ್ ಪ್ರಾಜೆಕ್ಟಿಂದ ಕೊಡಗು ಮತ್ತು ಸುತ್ತಲ ನಾಗರಹೊಳೆ, ಕಾವೇರಿ ನದಿಯಂತಹ ಜೀವ ವೈವಿಧ್ಯಮಯ ಪ್ರದೇಶದ ಮೇಲೆ ಪ್ರಭಾವ ಬೀರಲಿದೆ ಎಂಬ ವಿರೋಧ ವ್ಯಕ್ತವಾಗಿದೆ.

 

 

LEAVE A REPLY