ಇಂದು ನೀರು ವಿತರಣೆ ಇಲ್ಲ

aಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ಎಲ್ ಎಲ್ ಪಿ ಎಸ್ – 18 ಎಂಜಿಡಿ. ಸ್ಥಾವರದಲ್ಲಿ ತುರ್ತು ನಿರ್ವಹಣಾ ಕಾರ್ಯ ಇರುವುದರಿಂದ ನವೆಂಬರ್ 15ರಂದು ಬೆಳಿಗ್ಗೆ 8ರಿಂದ ಸಂಜೆ 6 ಗಂಟೆಯವರೆಗೆ ಮಂಗಳೂರು ನಗರದ ಭಾಗಶಃ ಪ್ರದೇಶ, ಕೋಡಿಕಲ್, ಕೊಟ್ಟಾರ ಜಲ್ಲಿಗುಡ್ಡ, ಕೂಳೂರು, ಪಣಂಬೂರು ಹಾಗೂ ಸುರತ್ಕಲ್, ಕಾಟಿಪಳ್ಳ ಪ್ರದೇಶಗಳಲ್ಲಿ ನೀರು ವಿತರಣೆಯಲ್ಲಿ ಅಡಚಣೆ ಉಂಟಾಗುವುದು ಎಂದು ಮಹಾನಗರಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.