ಕೊಳವೆ ಬಾವಿ ಕೊರೆದು ಒಂದೂವರೆ ವರ್ಷವಾದರೂ ಕುಡಿಯಲು ನೀರಿಲ್ಲ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮಂಜೇಶ್ವರ ಗ್ರಾ ಪಂ ವ್ಯಾಪ್ತಿಯ ತೂಮಿನಾಡಿನ ಅಲ್ ಫಾತಾಃ ಜುಮ ಮಸೀದಿಗೆ ಸಮೀಪವಾಗಿ ಸುಮಾರು ಒಂದೂವರೆ ವರ್ಷಕ್ಕೆ ಮೊದಲು ಕೇರಳ ನೀರು ಸರಬರಾಜು ಇಲಾಖೆಯ ವತಿಯಿಂದ ಕೊಳವೆ ಬಾವಿ ಕೊರೆಯಲಾಗಿದ್ದು, ಆ ಸಮಯದಲ್ಲೇ ಇಲ್ಲಿ ಧಾರಾಳವಾದ ನೀರು ಕೂಡಾ ಲಭಿಸಿದೆ. ಈ ಹಿನ್ನೆಲೆಯಲ್ಲಿ ಇದರ ಸಮೀಪವೇ ಪಂಪ್ ಶೆಡ್ ನ್ನು ಕೂಡಾ ನಿರ್ಮಿಸಲಾಗಿತ್ತು.

ಕಳೆದ ಬೇಸಿಗೆಯ ಸಮಯದಲ್ಲಿ ನೀರಿಗಾಗಿ ತೂಮಿನಾಡು ಕಾಲನಿ ನಿವಾಸಿಗಳು ಪರದಾಡುತಿರುವ ಸಮಯದಲ್ಲಿ ಹಲವು ಸಲ ಗ್ರಾಮಸ್ಥರು ಅಧಿಕಾರಿಗಳಲ್ಲಿ ವಿನಂತಿಸಿಕೊಂಡಿದ್ದರೂ ವಾಟರ್ ಅಥಾರಿಟಿ ಅಧಿಕಾರಿಗಳಿಂದ ಯವುದೇ ಸ್ಪಂದನೆ ಇರಲಿಲ್ಲವೆನ್ನಲಾಗಿದೆ.

ಇದೀಗ ತೂಮಿನಾಡಿನಲ್ಲಿ ಸೆಕೆಕಾಲ ಆರಂಭವಾಗುವ ಮೊದಲೇ ನೀರಿಗಾಗಿ ಒದ್ದಾಡುತ್ತಿರುವಾಗ ಇಲ್ಲಿ ಕಾರ್ಯಾಚರಿಸುವ ಎರಡು ಪಂಪು ಹೌಸ್ ಪೈಕಿ ಒಂದು ಉಪಯೋಗ ಶೂನ್ಯವಾಗಿದೆ. ಉಪಯೋಗವಿರುವ ಇನ್ನೊಂದು ಪಂಪ್ ಹೌಸಿನಿಂದ ಇದೀಗ ಎರಡು ದಿವಸಕ್ಕೊಮ್ಮೆ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಆದರೂ ಎಲ್ಲರಿಗೂ ನೀರು ಸಾಕಾಗುತ್ತಿಲ್ಲವೆಂಬ ಆರೋಪ ಕೂಡಾ ಇದೆ.

ಆದರೆ ಗ್ರಾಮದ ಜನತೆ ನೀರಿಗಾಗಿ ಇಷ್ಟೆಲ್ಲಾ ಪರದಾಡುತಿದ್ದರೂ ವಾರ್ಡ್ ಸದಸ್ಯೆ ಗಾಢ ನಿದ್ರೆಗೆ ಜಾರಿದ್ದು, ಲೆಕ್ಕಕುಂಟು ಆಟಕ್ಕಿಲ್ಲದ ರೀತಿಯಲಾಗಿರುವುದಾಗಿ ಊರವರು ಆಡಿಕೊಳ್ಳುತಿದ್ದಾರೆ.  ಈ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸಿದ ಮಂಜೇಶ್ವರ ಗ್ರಾಹಕರ ವೇದಿಕೆ ಕಾರ್ಯದರ್ಶಿ ಮಸೀದಿ ಪಕ್ಕದಲ್ಲಿರುವ ಪಂಪ್ ಶೆಡ್ಡಿಗೆ ವಿದ್ಯುತ್ ಸಂಪರ್ಕವನ್ನು ನೀಡಿ ಒಂದು ವಾರದೊಳಗೆ ಅದನ್ನು ಕಾರ್ಯವೆಸೆಗುವಂತೆ ಮಾಡದೇ ಇದ್ದರೆ ಊರವನ್ನು ಸೇರಿಸಿ ವಾಟರ್ ಆಥೋರಿಟಿ ಇಲಾಖೆಯ ಮುಂಬಾಗದಲ್ಲಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸುವುದಾಗಿ ಎಚ್ಚರಿಸಿದ್ದಾರೆ.

ಅದೇ ರೀತಿ ವರ್ಕಾಡಿ ಗ್ರಾ ಪಂ ವ್ಯಾಪ್ತಿಯ ಗುವೆದಪಡ್ಪುನಲ್ಲಿ ನಿರ್ಮಿಸಲಾದ ಟ್ಯಾಂಕಿನಲ್ಲಿ 2017 ಎಪ್ರಿಲಿನತನಕ ಸರಬರಾಜು ಮಾಡಲು ಬೇಕಾಗಿರುವ ನೀರನ್ನು ಶೇಖರಿಸಿಟ್ಟಿರುವ ಹಿನ್ನೆಲೆಯಲ್ಲಿ ಅದರ ಪೈಪ್ ಲೈನ್À ಒಂದು ಸಂಪರ್ಕವನ್ನು ಕುಂಜತ್ತೂರು ತೂಮಿನಾಡಿಗೂ ನೀರು ಸಿಗುವ ವ್ಯವಸ್ಥೆಯನ್ನು ಕಲ್ಪಿಸುವಂತೆ ಅಧಿಕಾರಿಗಳನ್ನು ವೇದಿಕೆ ವಿನಂತಿಸಿಕೊಂಡಿದೆ.