ಕಪ್ಪು ಹಣ ಘೋಷಣೆ ಕನಸು ಕಾಣುವುದು ವ್ಯರ್ಥ

ಸಾಂದರ್ಭಿಕ ಚಿತ್ರ

ನವೆಂಬರ್ 8ರ ನೋಟು ಅಮಾನ್ಯ ಘೋಷಣೆಯ ನಂತರ ನೋಟಿನ ಬಗ್ಗೆ ದಿನಕ್ಕೊಂದು ಘೋಷಣೆ ಹೊರಬೀಳುತ್ತಿದೆ  ರೂಪಾಯಿ 500 ಮತ್ತು 1000 ನೋಟಿನ ಬದಲಾವಣೆಗೆ ಡಿಸೆಂಬರ್ 10ರಂದು ಅಂತಿಮ ಗಡುವೆಂದು ಹಿಂದೆ ನಿರ್ಧರಿಸಲಾಗಿತ್ತು  ಆದರೆ ಗಡುವಿನ ನಂತರ 10ಕ್ಕಿಂತ ಹೆಚ್ಚು ಹಳೆ ನೋಟುಗಳನ್ನು ಹೊಂದಿರುವವರಿಗೆ ಶೇ 50ಕ್ಕಿಂತ ಹೆಚ್ಚು ದಂಡ ವಿಧಿಸುವ ಸಂಭವವಿದೆಯೆಂದು ಮಾಧ್ಯಮಗಳು ನಿನ್ನೆ ವರದಿ ಮಾಡಿದೆ
ಒಂದೊಮ್ಮೆ ಇದು ನಿಜವಾದರೆ ಈ ಸಂಗತಿ ಹಾಸ್ಯಾಸ್ಪದವಲ್ಲವೇ   ಯಾರಾದರೂ ಬಳಕೆಗೆ ಬಾರದ ಹೆಚ್ಚಿನ ನೋಟುಗಳನ್ನು ಇಟ್ಟುಕೊಳ್ಳುತ್ತಾರೆಯೇ   ಒಂದು ವೇಳೆ ಇಂತಹ ನೋಟುಗಳು ತಮ್ಮಲ್ಲಿದ್ದರೆ ಈ ನೋಟುಗಳಿಗೆ ಮುಕ್ತಿ ಕಾಣಿಸದಿರುತ್ತಾರೆಯೇ
ಕಾಳಧನ ಹೊಂದಿದ್ದವರ ನೋಟುಗಳು ಈಗಾಗಲೇ ಬಿಳಿಯಾಗಿದೆ  ಅಧಿಕಾರಿಗಳು  ರಾಜಕಾರಣಿಗಳು  ಹೊಸ ಹೊಸ ನೋಟುಗಳಿಗೆ ಹಳೆ ನೋಟುಗಳನ್ನು ಈಗಾಗಲೇ ಬದಲಿಸಿಕೊಂಡಾಗಿವೆ  ಇಂತಹ ಘಟನೆಗಳಲ್ಲಿ ಕೆಲವು ಪ್ರಕರಣಗಳಷ್ಟೇ ಹೊರಬೀಳುತ್ತಿವೆ
ಹಾಗಾಗಿ ಕಾಳಧನಿಕರಿಂದ ಕಪ್ಪು ಹಣ ಘೋಷಣೆ ಕನಸನ್ನು ಇನ್ನೂ ಕಾಣುವುದು ವ್ಯರ್ಥವಲ್ಲವೇ

  • ವಿನಯ ಕರ್ಕೇರ  ಮಂಗಳೂರು