ಸೇನೆ ಹಿಂಪಡೆಯದೆ ಭಾರತ ಜತೆ ಮಾತುಕತೆಗೆ ಅವಕಾಶವಿಲ್ಲ : ಚೀನಾ

 ಬೀಜಿಂಗ್ : ಸಿಕ್ಕಿಂ ಪ್ರಾಂತ್ಯದ ವಿಷಯದಲ್ಲಿ ಸೇನೆ ಮುಖಾಮುಖಿ ಪರಿಹಾರಕ್ಕೆ ಮಾತುಕತೆ ನಡೆಸಲು ನಮ್ಮಲ್ಲಿ ಯಾವುದೇ ಅವಕಾಶವಿಲ್ಲ ಮತ್ತು ಡೋಂಗ್‍ಲಾಂಗ್ ಅಥವಾ ಡೋಕ್ಲಂ ಪ್ರಾಂತ್ಯದಿಂದ ಭಾರತೀಯ ಸೇನಾ ಪಡೆ ಹಿಂಪಡೆದುಕೊಳ್ಳುವುದೇ ಪ್ರಸಕ್ತ ಬಿಕ್ಕಟ್ಟಿಗೆ ಒಂದು ಪರಿವಾರವಾದೀತು ಎಂದು ಚೀನಾ ಎಚ್ಚರಿಸಿದೆ.

ಭಾರತವು ಗಡಿಯಿಂದ ತನ್ನ ಸೇನೆ ಹಿಂಪಡೆಯದೆ ಹೋದಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಈ ನಿಟ್ಟಿನಲ್ಲಿ ಭಾರತ ಸರಿಯಾಗಿ ಸ್ಪಂದಿಸಲಿ ಎಂದು ಚೀನಾದ ಅಧಿಕೃತ ಸುದ್ದಿಸಂಸ್ಥೆ `ಕಿನ್ ಹುವಾ’ ವರದಿ ಮಾಡಿದೆ.

ಚೀನಾ, ಪಾಕಿಸ್ತಾನ ಮತ್ತು ಭಾರತದ ವಿವಾದಿತ ಗಡಿ ಪ್ರದೇಶದಲ್ಲಿ 2013 ಮತ್ತು 2014ರಲ್ಲೂ ಇದೇ ಸ್ಥಿತಿ ಉಂಟಾಗಿದ್ದರೂ, ಹಿಂದಿನ ಆ ಎರಡೂ ಸಂದರ್ಭಗಳಲ್ಲಿ ರಾಜತಾಂತ್ರಿಕ ಪ್ರಯತ್ನದಿಂದ ಪರಿಸ್ಥಿತಿ ತಹಬಂದಿಗೆ ಬಂದಿತ್ತು. ಆದರೆ ಈಗಿನ ಚಿತ್ರಣ ಸಂಪೂರ್ಣ ಭಿನ್ನವಾಗಿದೆ ಎಂದು ಆ ಸುದ್ದಿಸಂಸ್ಥೆ ಹೇಳಿದೆ.