ಗೌರಿಗೆ ಶೂಟ್ ಮಾಡಿದ ರಾತ್ರಿ ದಾರಿದೀಪ ಇರಲಿಲ್ಲ

ಗೌರಿ ಲಂಕೇಶರ ಮನೆಯಿರುವ ರಸ್ತೆಯ ಬೀದಿ ದೀಪವನ್ನು ಆ ದಿನ ಮಾತ್ರವೇ ಒಂದು ಗಂಟೆ ಕಾಲ ಆರಿಸಲಾಗಿತ್ತು ಹಾಗೂ ದುಷ್ಕರ್ಮಿಗಳು ಬಂದು ಶೂಟ್ ಮಾಡುವಾಗ ಆ ರಸ್ತೆಯಲ್ಲಿ ಬೀದಿ ದೀಪಗಳೇ ಇರದೆ ಕತ್ತಲಾಗಿತ್ತು ಅದಕ್ಕಾಗಿ ಗೌರಿ ಮನೆಯ ಸೀಸಿ ಕ್ಯಾಮರಾದಲ್ಲಿ ಕೊಲೆಗಾರನ ಮುಖ ಅಷ್ಟು ಸ್ಪಷ್ಟವಾಗಿ ಮೂಡದಿರಲು ಕಾರಣ ಎಂದು ಪತ್ರಿಕೆಗಳು ವರದಿ ಮಾಡಿವೆ ಒಂದು ವೇಳೆ ಇದು ನಿಜವೇ ಆಗಿದ್ದಲ್ಲಿ ವಿದ್ಯುತ್ ಇಲಾಖೆಯಲ್ಲಿ ದಾರಿ ದೀಪ ನಿರ್ವಹಣೆ ಮಾಡುವ ವಿಭಾಗದಲ್ಲಿ ಯಾರಾದರೂ ನೌಕರರು ಕೊಲೆಗಾರರೊಂದಿಗೆ ಶಾಮೀಲಾಗಿರುವ ಸಾಧ್ಯತೆ ಇರಬಹುದಲ್ಲವೇ ಈ ದಿಕ್ಕಿನಲ್ಲಿ ಪೊಲೀಸರು ತನಿಖೆ ನಡೆಸಲಿ

  • ರಾಮಕೃಷ್ಣ ಕುಲಾಲ್  ಅಶೋಕನಗರ  ಮಂಗಳೂರು