ಶ್ರೀರಾಮನ ಅಸ್ತಿತ್ವದ ಬಗ್ಗೆ ದಾಖಲೆ ಇಲ್ಲ : ದ್ವಾರಕಾನಾಥ್

`ಬಾಬರಿ ಮಸೀದಿ ಧ್ವಂಸ ರಾಷ್ಟ್ರೀಯ ಅವಮಾನಕ್ಕೆ 25 ವರ್ಷ’ ವಿಚಾರ ಸಂಕಿರಣ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಶ್ರೀರಾಮನ ಅಸ್ತಿತ್ವದ ಬಗ್ಗೆ ಯಾವುದೇ ದಾಖಲೆ ಇಲ್ಲ. ಹೀಗಿರುವಾಗ ಶ್ರೀರಾಮ ಹುಟ್ಟಿದ್ದಾನೆ ಎನ್ನುವುದಕ್ಕೆ ಏನ್ ಪುರಾವೆ ಇದೆ ಎಂದು ಪ್ರಶ್ನಿಸಿದ್ದಾg ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ದ್ವಾರಕನಾಥ್.

ಶ್ರೀರಾಮನ ಅಸ್ತಿತ್ವಕ್ಕೆ ಸರಿಯಾದ ಸ್ಪಷ್ಟತೆಯಿಲ್ಲ. ಇತಿಹಾಸದಲ್ಲಿ ಮೂವರು ಮಹಾತ್ಮರಾದ ಬುದ್ಧ, ಕ್ರಿಸ್ತ, ಪೈಗಂಬರ್ ಇವರ ಸೃಷ್ಟಿಗೆ ದಾಖಲೆ ಮತ್ತು ಪುರಾವೆಗಳಿವೆ. ಆದರೆ ಶ್ರೀರಾಮ ಹುಟ್ಟಿದ್ದ ಎಂಬುದಕ್ಕೆ ಪುರಾವೆಗಳೇ ಇಲ್ಲ ಎಂದು ದ್ವಾರಕನಾಥ್ ಅಭಿಪ್ರಾಯಪಟ್ಟರು.

ಬಾಬರಿ ಮಸೀದಿ ಧ್ವಂಸದ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. `ಬಾಬರಿ ಮಸೀದಿ ಧ್ವಂಸ ರಾಷ್ಟ್ರೀಯ ಅವಮಾನಕ್ಕೆ 25 ವರ್ಷ’ ವಿಷಯದ ವಿಚಾರದ ಬಗ್ಗೆ ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಅಸ್ತಿತ್ವವೇ ಇಲ್ಲದ ವ್ಯಕ್ತಿಯ ಬಗ್ಗೆ ಏನು ಹೇಳಬೇಕು ಎಂದು ಅರ್ಥವಾಗುತ್ತಿಲ್ಲ. ಅಸ್ತಿತ್ವದಲ್ಲಿ ಇರದ ವ್ಯಕ್ತಿಯ ಬಗ್ಗೆ ಕೆಲ ಸಂಘಟನೆಗಳು ಯಾವ ರೀತಿಯಲ್ಲಿ ಸುಳ್ಳುಗಳನ್ನು ಹಬ್ಬಿಸುತ್ತಾ ಹೋಗುತ್ತಿದ್ದಾರೆ ಎಂಬುದು ಆಶ್ಚರ್ಯಕರ ವಿಷಯ. ಯಾವುದನ್ನು ನಂಬಬೇಕೋ, ಯಾವುದನ್ನು ಬಿಡಬೇಕೋ ಜನ ಗೊಂದಲಕ್ಕೊಳಗಾಗುತ್ತಿದ್ದಾರೆ ಎಂದು ಹೇಳಿದರು.