ವಕೀಲ ಪಿ ಪಿ ಹೆಗ್ಡೆ ಸಂಘಕ್ಕೆ ಸಂವಿಧಾನಿಕ ಮಾನ್ಯತೆ ಇಲ್ಲ

ರಾಜ್ಯ ವಕೀಲರ ಪರಿಷತ್ತು ಹೇಳಿಕೆ

ಬೆಂಗಳೂರು : ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ವಕೀಲರ ಸಂಘಗಳ ಪದಾಧಿಕಾರಿಗಳ ಸಭೆ ನಡೆದಿತ್ತು. ಈ ಸಭೆಯಲ್ಲಿ ಹಿರಿಯ ವಕೀಲ ಪದ್ಮಪ್ರಸಾದ್ ಹೆಗ್ಡೆ (ಪಿ ಪಿ ಹೆಗ್ಡೆ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು ಎಂದು ಪತ್ರಿಕೆ ಹೇಳಿಕೆಯನ್ನೂ ನೀಡಲಾಗಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್ಯ ವಕೀಲರ ಪರಿಷತ್ತು (ಕರ್ನಾಟಕ ಬಾರ್ ಕೌನ್ಸಿಲ್), ಪಿ ಪಿ ಹೆಗ್ಡೆ ನೇತೃತ್ವದ ರಾಜ್ಯವಕೀಲರ ಸಂಘಕ್ಕೆ ಸಂವಿಧಾನಿಕ ಮಾನ್ಯತೆ ಇಲ್ಲ ಎಂದು ಸ್ಪಷ್ಟನೆ ನೀಡಿದೆ.

“ಕರ್ನಾಟಕ ರಾಜ್ಯ ವಕೀಲರ ಪರಿಷತ್ತು (ಬಾರ್ ಕೌನ್ಸಿಲ್) ಒಂದು ಸಂವಿಧಾನಿಕ ಸ್ವಾಯತ್ತ ಸಂಸ್ಥೆಯಾಗಿದೆ. ಇದು ಯಾವುದೇ ಸದಸ್ಯರ ಅಥವಾ ಸದಸ್ಯರ ಭಾಗವಲ್ಲ. ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷರು ಸ್ಥಾಪಿಸಿರುವ ರಾಜ್ಯ ವಕೀಲರ ಸಂಘ ಅವರ ವೈಯಕ್ತಿಕ ಸಂಸ್ಥೆಯಾಗಿದೆ. ಈ ಸಂಸ್ಥೆಗೂ ರಾಜ್ಯ ವಕೀಲರ ಪರಿಷತ್ತಿಗೂ ಯಾವುದೇ ಸಂಬಂಧ ಇಲ್ಲ” ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸುಭಾಷ್ ಕೌಡಿಚಾರ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ವಕೀಲರು ಮತ್ತು ಸಾರ್ವಜನಿಕರು ಈ ಬಗ್ಗೆ ಗೊಂದಲಕ್ಕೆ ಈಡಾಗಬಾರದು ಎಂದು ಹೇಳಿರುವ ಅವರು, ಯಾವ ಸದಸ್ಯರೂ ಅವರ ಸ್ವಲಾಭದ ದೃಷ್ಟಿಯಿಂದ ರಚಿಸಿದ ಸಮಿತಿಗಳಿಗೆ ರಾಜ್ಯ ವಕೀಲರ ಪರಿಷತ್ತಿಗೆ ಯಾವುದೇ ಮಾನ್ಯತೆ ಇಲ್ಲ ಎಂದು ಕೌಡಿಚಾರ್ ಹೇಳಿದ್ದಾರೆ.

ಇದಕ್ಕೆ ವಕೀಲರ ಸಮುದಾಯ ಮಾನ್ಯತೆ ನೀಡುವ ಅಗತ್ಯವಿಲ್ಲ. ಇದನ್ನು ರಾಜ್ಯ ವಕೀಲರ ಪರಿಷತ್ತಿನ ಪರವಾಗಿ ಮತ್ತು ರಾಜ್ಯ ವಕೀಲರ ಸಮುದಾಯದ ಪರವಾಗಿ ತೀವ್ರವಾಗಿ ಖಂಡಿಸುವುದಾಗಿ ಕೌಡಿಚಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

LEAVE A REPLY