ಸಾಮಗ್ರಿ ಪಡೆಯಲು ಮೆಸೇಜ್ ಬಂದಿದೆ, ಆದರೆ ರೇಶನ್ ಅಂಗಡಿಯಲ್ಲಿ ಪಡಿತರವಿಲ್ಲ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ತಮ್ಮ ಮೊಬೈಲಿಗೆ ಬಂದ ಮೆಸೇಜ್ ಆದರಿಸಿ ಪಡಿತರ ಸಾಮಗ್ರಿಗಳನ್ನು ಪಡೆಯಲು ಪಡುಬಿದ್ರಿ ನ್ಯಾಯಬೆಲೆಯಂಗಡಿಗೆ ಹೋದ ಗ್ರಾಮಸ್ಥರಿಗೆ “ಯಾವುದೇ ಪಡಿತರ ಬಂದಿಲ್ಲ” ಎಂಬ ರೇಶನ್ ಅಂಗಡಿ ಸಿಬ್ಬಂದಿ ಉತ್ತರ ಶಾಕ್ ಕೊಟ್ಟಿದೆ.

ರಣಬಿಸಿಲಿಗೆ ಆಗಮಿಸಿದ ಗ್ರಾಮಸ್ಥರಿಗೆ ಸಿಬ್ಬಂದಿಯ ಉತ್ತರ ಖಾರವಾಗಿದ್ದು, ಇದರಿಂದ ಆಕ್ರೋಶಗೊಂಡ ಮಂದಿ ಸಿಬ್ಬಂದಿಯೊಂದಿಗೆ ಜಗಳಕ್ಕೆ ನಿಂತ ಘಟನೆಯೂ ನಡೆದಿದೆ. ಈ ಬಗ್ಗೆ ಉಡುಪಿ ತಹಶೀಲ್ದಾರ್ ಗಮನಕ್ಕೆ ತಂದಾಗ, “ಈ ಬಗ್ಗೆ ನನಗೆ ಯಾವುದೇ ಮಾಹಿತಿ ಬಂದಿಲ್ಲ. ತಕ್ಷಣ ಈ ಬಗ್ಗೆ ವಿಚಾರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸುತ್ತೇವೆ” ಎಂದು ತಿಳಿಸಿದ್ದಾರೆ.