ಬಂಟ್ಸ್ ಹಾಸ್ಟೆಲ್ ವೃತ್ತದ ಎಡ ತಿರುವಿನಲ್ಲಿ ಪಾರ್ಕಿಂಗ್ ಬೇಡ

ನಮ್ಮ ರಸ್ತೆಗಳ ಅವ್ಯವಸ್ಥೆ ಏನೆಂದು ತಿಳಿಯಬೇಕಾದರೆ ಬಂಟ್ಸ್ ಹಾಸ್ಟೆಲ್ ಬಳಿಯ ಸರ್ಕಲ್  ಆ್ಯಕ್ಸಿಸ್ ಬ್ಯಾಂಕ್ ಪಕ್ಕ  ಸುತ್ತ ಗಮನ ಹರಿಸಿದರೆ ಆಯ್ತು. ಜ್ಯೋತಿ ಬಸ್ ಸ್ಟ್ಯಾಂಡಿನಿಂದ ಮುಂದಕ್ಕೆ ಬರುವಾಗ ವಾಹನಗಳು ಎಡ ಬಲಕ್ಕೆ ಸರಿಯಾಗಿ ತಿರುಗಿ ಹೋಗಲು ಇಲ್ಲಿ ಕೆಲವು ಕೋನ್‍ಗಳನ್ನು ಹಾಕಿ ರಸ್ತೆಯನ್ನು ವಿಂಗಡನೆ ಮಾಡಲಾಗಿದೆ. ರಸ್ತೆ ವಿಂಗಡನೆ ಮಾಡಿದ್ದಂತೂ ಸರಿ  ಬಲ ಬದಿಗೆ ಹೋಗುವ ವಾಹನಗಳು ಅತ್ತ ಕದ್ರಿ ಕಡೆಗೆ  ಎಡಬದಿಗೆ ಕರಂಗಲ್ಪಾಡಿ  ಪಿವಿಎಸ್ ಸರ್ಕಲ್ ಕಡೆ ಹೋಗುವ ವಾಹನಗಳು ಇತ್ತ ಹೋಗುವ ಕ್ರಮ ಸರಿಯಾಗಿದೆ. ಆದರೇನು ಮಾಡುವುದು  ಕರಂಗಲ್ಪಾಡಿಯತ್ತ ನೂರಾರು ವಾಹನಗಳು ದೌಡಾಯಿಸುತ್ತವೆ. ಆದರೆ ಆ್ಯಕ್ಸಿಸ್ ಬ್ಯಾಂಕಿನ ಎದುರುಗಡೆ ರಸ್ತೆಯುದ್ಧಕ್ಕೂ ದ್ವಿಚಕ್ರ ಹಾಗೂ ಇನ್ನಿತರ ವಾಹನಗಳು ಪಾರ್ಕ್ ಮಾಡುವ ಕಾರಣ ಇಲ್ಲಿನ ರಸ್ತೆ ಅಗಲ ಕಿರಿದಾಗಿ ವಾಹನಗಳು ಸಂಚರಿಸಲು ಪಾದಚಾರಿಗಳು ನಡೆದಾಡಲು ತುಂಬಾ ಕಷ್ಟಕರವಾಗಿದೆ. ಅಲ್ಲದೆ ಇಲ್ಲಿನ ರಸ್ತೆ ಬದಿ ಹೊಂಡಗುಂಡಿಗಳಿಂದ ತುಂಬಿದೆ ಹಾಗೂ ಮೇಲ್ಮೈ ಸಮತಟ್ಟಾಗಿರದೆ ದ್ವಿಚಕ್ರ ವಾಹನ ಸವಾರರ ಜೀವಕ್ಕೆ ರಿಸ್ಕ್ ಕಾದಿದೆ.
ಹಾಗಾದ ಕಾರಣ ಇಲ್ಲಿನ ಎಡಬದಿಯ ಜಾಗವನ್ನು ಸಮತಟ್ಟು ಮಾಡುವುದರ ಜತೆಗೆ ಇಲ್ಲಿ ವಾಹನ ಪಾರ್ಕಿಂಗ್ ನಿಷೇಧಿಸಿದರೆ ಮೇಲೆ ತಿಳಿಸಿರುವ ಎಲ್ಲಾ ಸಮಸ್ಯೆಗಳು ಪರಿಹಾರವಾದಂತಾಗಿ ಎಲ್ಲಾ ವಾಹನಗಳ ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವುದು.

  • ಜೆ ಎಫ್ ಡಿಸೋಜ, ಅತ್ತಾವರ