ಇಪಿಎಫ್ ಕಚೇರಿ ಮುಂಭಾಗದ ರಸ್ತೆಯಲ್ಲಿ ವಾಹನ ಪಾರ್ಕ್ ಬೇಡ

ಒಳರಸ್ತೆಗಳಲ್ಲೂ ವಾಹನ ಪಾರ್ಕಿಂಗ್ ಬಾಧೆ ಸಾರ್ವಜನಿಕರನ್ನು ಪೀಡಿಸುತ್ತಿದೆ  ಕೆಲವು ರಸ್ತೆಗಳ ಇಕ್ಕೆಲಗಳಲ್ಲಿ ಕೆಲವೆಡೆ ಡಬ್ಬಲ್ ಪಾರ್ಕಿಂಗ್ ರಿಕ್ಷಾದವರನ್ನು ಸೇರಿಸಿದರೆ ಅದು ಟ್ರಿಬಲ್ ಪಾರ್ಕಿಂಗ್  ಒಟ್ಟಾರೆ ಎಲ್ಲೆಲ್ಲೂ ಅಡ್ಡಾದಿಡ್ಡಿ ಪಾರ್ಕಿಂಗೇ  ಕೆಲವು ಜನ ವಾಹನವನ್ನು ತಮ್ಮ ಮನೆಯಲ್ಲಿ ನಿಲ್ಲಿಸಿದಂತೆ ರಸ್ತೆಯಲ್ಲಿ ಸಹ ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಕೆಟ್ಟ ಚಾಳಿ ಮೆರೆಯುತ್ತಾರೆ  ಸಾರ್ವಜನಿಕ ರಸ್ತೆಗಳಲ್ಲಿ ವಾಹನ ನಿಲ್ಲಿಸುವ ಬಗ್ಗೆ ಒಂದಿಷ್ಟು ಬುದ್ಧಿ ಉಪಯೋಗಿಸುವುದಿಲ್ಲ  ಇದರಿಂದ ಇತರ ವಾಹನಿಗರು ತುಂಬಾ ತೊಂದರೆಗೊಳಗಾಗುತ್ತಾರೆ  ನಮ್ಮ ಪಾರ್ಕಿಂಗ್ ವ್ಯವಸ್ಥೆ ಯಾವಾಗ ಸುಧಾರಿಸುತ್ತದೋ ದೇವನೇ ಬಲ್ಲ  ನಮ್ಮಲ್ಲಿ ಪ್ರತೀ ಶುಕ್ರವಾರ ಪೂಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನೇರ ಪೊಲೀಸ್ ಫೋನ್ಇನ್ ಕಾರ್ಯಕ್ರಮ ನಡೆಯತ್ತಿರುತ್ತದೆ  ಇಷ್ಟರತನಕ ಜರಗಿದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗಳನ್ನು ಸಮಸ್ಯೆಗಳನ್ನು ಪರಿಶೀಲಿಸಿದಾಗ ಹೆಚ್ಚಾಗಿನ ಸಮಸ್ಯೆಗಳು ಪಾರ್ಕಿಂಗ್ ಅವ್ಯವಸ್ಥೆಗೆ ಸಂಬಂಧಪಟ್ಟವು ಎಂಬುದು ಸಾಬೀತಾಗಿದೆ  ಆದರೆ ಈ ಬಗ್ಗೆ ಸೂಕ್ತ ಪರಿಹಾರ ಜನರಿಗೆ ಲಭಿಸದಾಗಿದೆ
ಸಿಲ್ವ ರಸ್ತೆ ಮಂಗಳ ಹೋಟೆಲಿನಿಂದ ಹೈಲ್ಯಾಂಡ್ಸಗೆ ಹೋಗುವ ರಸ್ತೆ ಯಲ್ಲಿನ ಇಫಿಎಫ್ ಆಫೀಸ್ ಮುಂಭಾಗದಲ್ಲಿನ ಪಾರ್ಕಿಂಗ್ ಅವ್ಯವಸ್ಥೆ ಬಗ್ಗೆ ಗಮನಿಸಬೇಕು  ಇದರ ಮುಂಭಾಗದ ಕಿರಿದಾದ ರಸ್ತೆಯಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಪಾರ್ಕ್ ಮಾಡಲಾಗುತ್ತಿದೆ  ಇಪಿಎಫ್ ಆವರಣದೊಳಗೆ ಸಾಕಷ್ಟು ಸ್ಥಳವಕಾಶವಿದೆ. ಈ ಸ್ಥಳವನ್ನು ವಾಹನ ಪಾರ್ಕಿಂಗಿಗೆ ಯಾಕಾಗಿ ಬಳಸಬಾರದು  ಟ್ರಾಫಿಕ್ ಪೊಲೀಸ್‍ನವರು ಈ ಬಗ್ಗೆ ಕ್ರಮ ತೆಗೆದುಕೊಳ್ಳಲಿ

  • ಜೆ ಎಫ್ ಡಿಸೋಜ  ಅತ್ತಾವರ