ಮಹಿಳೆಯೆಂದು ಶಿಕ್ಷೆ ವಿಚಾರದಲ್ಲಿ ಮೃದು ಧೋರಣೆ ಸಲ್ಲ : ಸುಪ್ರೀಂ

ನವದೆಹಲಿ : ಮಹಿಳೆಯೆಂಬ ಒಂದೇ ಕಾರಣಕ್ಕೆ ಕಡಿಮೆ ಶಿಕ್ಷೆ ವಿಧಿಸಬೇಕೆಂದೇನಿಲ್ಲ ಎಂದು ಕೊಲೆಯತ್ನ ಪ್ರಕರಣದಲ್ಲಿ ಮಹಿಳೆಯೊಬ್ಬಳ ಜೈಲು ಶಿಕ್ಷೆಯನ್ನು ಮನ್ನಾ ಮಾಡಿದ ಕೆಳಗಿನ ಹಂತದ ನ್ಯಾಯಾಲಯದ ಆದೇಶವೊಂದನ್ನು ಬದಿಗಿರಿಸುತ್ತಾ ಸುಪ್ರೀಂ ಕೋರ್ಟ್ ಹೇಳಿದೆ. ಆ ಮಹಿಳೆಯ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶ ಹೈಕೋರ್ಟ್ ಆಕೆಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ರೂ 2000 ದಂಡ ವಿಧಿಸಿತ್ತು. ಆದರೆ ತಾನೊಬ್ಬಳು ಮೂರು ಅಪ್ರಾಪ್ತ ಮಕ್ಕಳ ತಾಯಿ ಎಂದು ಆ ಮಹಿಳೆ ಅಲವತ್ತುಕೊಂಡಾಗ ಆಕೆಯನ್ನು ಜೈಲಿಗೆ ಕಳಿಸದಿರಲು ಹೈಕೋರ್ಟ್  ನಿರ್ಧರಿಸಿತ್ತು. ಈ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟಿನ ಮೊರೆ ಹೋಗಲಾಗಿತ್ತು.