ಈದ್ ಮಿಲಾದಗೆ ವಿವೇಕಾನಂದ ಶಾಲೆ ರಜೆ ಕೊಟ್ಟಿಲ್ಲ

ಪುತ್ತೂರು : ಡಿ 12ರಂದು ಈದ್‍ಮಿಲಾದ್ ಹಬ್ಬ ನಡೆದಿದ್ದು ಆ ದಿನದಂದು ಸರಕಾರ ಶಾಲಾ ಕಾಲೇಜುಗಳಿಗೆ ರಜೆ ನೀಡಿ ಆದೇಶವನ್ನು ಹೊರಡಿಸಿದ್ದು, ಡಿ 13 ರಂದು ಸರಕಾರಿ ರಜೆಯಾಗಿ ಘೋಷಣೆ ಮಾಡಿತ್ತು. ಆದರೆ ಪುತ್ತೂರಿನ ವಿವೇಕಾನಂದ ಪ್ರೌಢ ಶಾಲೆಗಳಿಗೆ ಈ ಬಾರಿ ಈದ್ ಮಿಲಾದ್ ರಜೆಯನ್ನು ನೀಡಿಲ್ಲ.

ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರೂ ಸಂಸ್ಥೆ ರಜೆ ನೀಡದೆ ತನ್ನ ಧೋರಣೆಯನ್ನು ಜಾಹೀರುಗೊಳಿಸಿದೆ ಎಂದು ಕೆಲವು ಮುಸ್ಲಿಂ ಸಂಘಟನೆಗಳು ಆರೋಪಿಸಿವೆ.

ಸರಕಾರಿ ಅನುದಾನಿತ ಶಾಲೆಯಾಗಿರುವ ಕಾರಣ ಜಿಲ್ಲಾಧಿಕಾರಿಗಳ ಆದೇಶವನ್ನು ಪಾಲನೆ ಮಾಡಬೇಕಿತ್ತು. ಆದರೆ ಯಾವ ಕಾರಣಕ್ಕೆ ರಜೆ ನೀಡಿಲ್ಲ ಎಂಬುದರ ಕುರಿತು ಕಾರಣವನ್ನು ನೀಡಿಲ್ಲ.

ಶಾಲೆಯಲ್ಲಿ ಕಲಿಯುವ ಮುಸ್ಲಿಂ ವಿದ್ಯಾರ್ಥಿಗಳಿಗೆ ಒಂದು ದಿನದ ಗೈರಾಗಿದೆ. ವಿವೇಕಾನಂದ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಕಲ್ಲಡ್ಕ ಆಯ್ಕೆಯಾದ ಬಳಿಕ ಈ ಬದಲಾವಣೆ ನಡೆದಿದೆ ಎಂದು ಜನ ಮಾತನಾಡುತ್ತಿದ್ದಾರೆ.

ಪುತ್ತೂರಿನಲ್ಲಿರುವ ಎಲ್ಲಾ ಶಾಲಾ ಕಾಲೇಜುಗಳಿಗೆ ಡಿ 12ರಂದು ರಜೆ ನೀಡಿದ್ದರೂ ವಿವೇಕಾನಂದ ಸಂಸ್ಥೆಗಳು ಮಾತ್ರ ರಜೆ ನೀಡದೇ ಇದ್ದುದು ಕೆಲವರ ಆಕ್ರೋಶಕ್ಕೂ ಕಾರಣವಾಗಿದೆ.