ಕಲಬುರ್ಗಿ ಪ್ರಕರಣದ ತನಿಖೆಯಲ್ಲಿ ಪ್ರಗತಿ ಇಲ್ಲವೆಂದು ಒಪ್ಪಿಕೊಂಡ ಗೃಹ ಸಚಿವ

ಬೆಂಗಳೂರು : ವಿದ್ವಾಂಸ ಹಾಗೂ ವಿಚಾರವಾದಿ ಎಂ ಎಂ ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲವೆಂಬುದನ್ನು ಗೃಹ ಸಚಿವ ರಾಮಲಿಂಗಾ ರೆಡ್ಡಿ ವಿಧಾನಪರಿಷತ್ತಿನಲ್ಲಿ ಒಪ್ಪಿಕೊಂಡಿದ್ದಾರೆ. ತನ್ನ ಪತಿಯ ಹಂತಕರ ಪತ್ತೆಗೆ ಯಾವುದೇ ಗಂಭೀರ ಪ್ರಯತ್ನಗಳು ನಡೆಯುತ್ತಿಲ್ಲ ಎಂದು ಕಲಬುರ್ಗಿಯವರ ಪತ್ನಿ ಉಮಾದೇವಿ ಸುಪ್ರೀಂ ಕೋರ್ಟಿಗೆ ಮೊರೆ  ಹೋಗಿರುವ ಹಿನ್ನಲೆಯಲ್ಲಿ ಸಚಿವರ ಈ ಹೇಳಿಕೆ ಬಂದಿದೆ.

ವಿವಿಧ ಕಾರಣಗಳಿಂದಾಗಿ ಕಲಬುರ್ಗಿ ಪ್ರಕರಣದ ತನಿಖೆಯಲ್ಲಿ ಪ್ರಗತಿಯಾಗಿಲ್ಲ ಎಂದು ಕಾನೂನು ಸುವ್ಯವಸ್ಥೆಯ ಕುರಿತಾದ ಚರ್ಚೆಯಲ್ಲಿ ಭಾಗವಹಿಸುತ್ತಾ ಸಚಿವರು ಹೇಳಿದರು. ಈ ಪ್ರಕರಣವನ್ನು ಸರಕಾರವೇಕೆ ಸಿಬಿಐಗೆ ವಹಿಸಬಾರದು ಎಂದು ಬಿಜೆಪಿಯ ಕೆ ಬಿ ಶರಣಪ್ಪ ಕೇಳಿದಾಗ ಪ್ರತ್ಯುತ್ತರ ನೀಡಿದ ರೆಡ್ಡಿ, “ಅದರಿಂದೇನು ಪ್ರಯೋಜನ ? ನರೇಂದ್ರ ಧಾಬೋಲ್ಕರ್ ಪ್ರಕರಣವ್ನೇ ಸಿಬಿಐಗೆ ಬೇಧಿಸಲು ಸಾಧ್ಯವಾಗಿಲ್ಲ. ಗೋವಿಂದ ಪನ್ಸಾರೆ ಪ್ರಕರಣದಲ್ಲೂ ಮಹಾರಾಷ್ಟ್ರ ಪೊಲೀಸರ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ” ಎಂದರು.

ಕಲಬುರ್ಗಿಯ ಪತ್ನಿ ಉಮಾದೇವಿ ಸುಪ್ರೀಂ ಕೋರ್ಟಿಗೆ ಮೊರೆ ಹೋದ ನಂತರ ಧಾಬೋಲ್ಕರ್, ಪನ್ಸಾರೆ ಮತ್ತು ಕಲಬುರ್ಗಿ ಹತ್ಯೆ ಪ್ರಕರಣಗಳು ಒಂದೇ ರೀತಿ ನಡೆದಿವೆಯೆಂಬ ಹಿನ್ನೆಲೆಯಲ್ಲಿ ನ್ಯಾಯಾಲಯ ಕೇಂದ್ರಕ್ಕೆ ನೋಟಿಸ್ ಜಾರಿಗೊಳಿಸಿತ್ತು.

 

LEAVE A REPLY