`ಎಂ ಆರ್ ಪಿ ಎಲ್ ವಿಸ್ತರಣೆಗೆ ಬಲವಂತದ ಭೂಸ್ವಾಧೀನ ಇಲ್ಲ’

ದೇಶಪಾಂಡೆ ಭರವಸೆ

ಮಂಗಳೂರು : ಎಂ ಆರ್ ಪಿ ಎಲ್ ನಾಲ್ಕನೇ ಹಂತದ ಘಟಕದ ವಿಸ್ತರಣೆಗೆ ರೈತರು ಹಾಗೂ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ  1011 ಎಕರೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದ್ದು, ಯಾವುದೇ ಕಾರಣಕ್ಕೂ ಬಲತ್ಕಾರದ ಭೂಸ್ವಾಧೀನ ಮಾಡುವುದಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿರುವ ರಾಜ್ಯ ಕೈಗಾರಿಕಾ ಸಚಿವ ದೇಶಪಾಂಡೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸ್ಥಳೀಯರನ್ನು, ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಭೂ ಸ್ವಾಧೀನಪಡಿಸಲಾಗುವುದು. ರಾಜ್ಯದ ಅಭಿವೃದ್ಧಿಗೆ, ಉದ್ಯೋಗಾವಕಾಶಗಳ ಸೃಷ್ಟಿಗೆ ಕೈಗಾರಿಕೆಗಳ ಸ್ಥಾಪನೆ ಅಗತೀ ಅಗತ್ಯವಾಗಿದೆ ಎಂದೂ ಅಭಿಪ್ರಾಯಪಟ್ಟ ಅವರು, “ಜನ ಈ ಬಗ್ಗೆ ನಿರ್ಧಾರ ಮಾಡಬೇಕು. ಜಮೀನು ಕಳೆದುಕೊಂಡವರಿಗೆ ಕಾನೂನು ಪ್ರಕಾರ ಪರಿಹಾರವನ್ನು ನೀಡಲಾಗುತ್ತದೆ” ಎಂದರು.