ಸಿಬಿಐ ಮೇಲೆ ವಿಶ್ವಾಸವಿಲ್ಲ : ಸೀಎಂಗೆ ಇಂದಿರಾ ಲಂಕೇಶ್

ಬೆಂಗಳೂರು : ತನ್ನ ಮಗಳು ಗೌರಿ ಹತ್ಯೆ ತನಿಖೆ ನಡೆಸಲು ತಮಗೆ ಸಿಬಿಐ ಮೇಲೆ ವಿಶ್ವಾಸವಿಲ್ಲ ಎಂದು ಇತ್ತೀಚೆಗೆ ಹತ್ಯೆಗೀಡಾದ ಪತ್ರಕರ್ತೆ ಗೌರಿ ಲಂಕೇಶ್ ಅವರ ತಾಯಿ ಇಂದಿರಾ ಲಂಕೇಶ್ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಭೇಟಿ ಸಂದರ್ಭ ಹೇಳಿದರು. “ಸಿಬಿಐ ಬದಲು ವಿಶೇಷ ತನಿಖಾ ತಂಡ ತನಿಖೆ ನಡೆಸಲಿ” ಎಂದು ಹೇಳಿದ ಅವರು ತಮ್ಮ ಪುತ್ರಿಯ ಕೊಲೆಗಾರರನ್ನು ಬಂಧಿಸಿ ಆಕೆಯ ನ್ಯಾಯ ದೊರಕಿಸಿ ಕೊಡಬೇಕಾಗಿ ಕಳಕಳಿಯ ವಿನಂತಿ ಮಾಡಿದರು. ಇಂದಿರಾ ಜತೆ ಜನವಾದಿ ಮಹಿಳಾ ಸಂಘಟನೆಯ ಕೆ ಎಸ್ ವಿಮಲಾ ಇದ್ದರು. ಇಂದಿರಾ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ, ತಮ್ಮ ಸರಕಾರ ಈ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಬದ್ಧವಾಗಿರುವುದಾಗಿ ತಿಳಿಸಿದರು.