ಪದ್ಮನಾಭ ದೇವಳಕ್ಕೆ ಚೂಡಿದಾರ ಧರಿಸುವ ಮಹಿಳೆಗೆ ಪ್ರವೇಶವಿಲ್ಲ

ಹೈಕೋರ್ಟ್ ತೀರ್ಪು

ತಿರುವನಂತಪುರಂ : ಇಲ್ಲಿನ ಪದ್ಮನಾಭ ಸ್ವಾಮಿ ದೇವಸ್ಥಾನದೊಳಗೆ ಸಲ್ವಾರ್ ಕಮೀಝ್ ಮತ್ತು ಚೂಡಿದಾರ ಧರಿಸಿಕೊಂಡು ಮಹಿಳೆಯರು ಪ್ರವೇಶಿಸುವುದಕ್ಕೆ ಕೇರಳ ಹೈಕೋರ್ಟ್ ನಿನ್ನೆ ನಿಷೇಧ ಹೇರಿದೆ.

ದೇವಸ್ತಾನದÀ ಸಂಪ್ರದಾಯದಂತೆ ಮಹಿಳೆಯರು ಸಲ್ವಾರ ಕಮೀಝ್ ಅಥವಾ ಚೂಡಿದಾರ ಧರಿಸಿದ್ದರೆ ಅಂತಹವರು ಸೊಂಟದ ಮೇಲೆ ಮುಂಡು (ಧೋತಿ) ಉಟ್ಟುಕೊಳ್ಳಬೇಕು. “ಆದರೆ ಸೀರೆ ಉಟ್ಟುಕೊಂಡ ಮಹಿಳೆಯರಿಗೆ ಧಾರಾಳವಾಗಿ ದೇವಸ್ಥಾನದೊಳಗೆ ಪ್ರವೇಶಿಸಬಹುದಾಗಿದೆ” ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

2016 ನವಂಬರ್ 30ರಂದು ದೇವಸ್ಥಾನದ ಕಾರ್ಯ ನಿರ್ವಹಾಣಾಧಿಕಾರಿ ಸತೀಶ್, ಚೂಡಿದಾರ ಧರಿಸಿಕೊಂಡ ಮಹಿಳೆಯರಿಗೂ ದೇವಸ್ಥಾನದೊಳಗೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದರು. ಇದಕ್ಕೆ ದೇವಸ್ಥಾನಕ್ಕೆ ಸಂಬಂಧಿಸಿ ಒಂದು ವರ್ಗದ ಮಂದಿ ಮತ್ತು ಸಾಮಾನ್ಯ ಭಕ್ತರು ವಿರೋಧ ವ್ಯಕ್ತಪಡಿಸಿದ್ದರು.