`ಬಿಜೆಪಿ ಕಾರ್ಯಕಾರಿ ಸಭೆಯಲ್ಲಿ ರಾಜ್ಯ ಉಪಚುನಾವಣೆ ಸೋಲಿನ ಚರ್ಚೆ ಇಲ್ಲ’

ಬೆಂಗಳೂರು : ರಾಜ್ಯದ ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರಗಳಿಗೆ ನಡೆದ ಉಪ-ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿರುವ ಬಗ್ಗೆ ಕಳೆದ ವಾರ ಭುವನೇಶ್ವರದಲ್ಲಿ ನಡೆದ ಪಕ್ಷ ಕಾರ್ಯಕಾರಿಣಿ ಸಭೆಯಲ್ಲಿ ಚಕಾರ ಎತ್ತಲಾಗಿಲ್ಲ ಎಂದು ಪಕ್ಷ ಮೂಲವೊಂದು ಹೇಳಿದೆ.

ಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಪಕ್ಷಾಧ್ಯಕ್ಷ ಅಮಿತ್ ಶಾ ಉಪಸ್ಥಿತರಿದ್ದರು. ಆದರೆ ಯಾರೂ ಕರ್ನಾಟಕದ ಎರಡು ಕ್ಷೇತ್ರಗಳಲ್ಲಿ ಬಿಜೆಪಿಗಾದ ಹಿನ್ನಡೆ ಕುರಿತು ಚರ್ಚಿಸಿಲ್ಲ ಎಂದು ಕಾರ್ಯಕಾರಿಣಿ ಸಮಿತಿಯಲ್ಲಿದ್ದ ಕರ್ನಾಟಕದ ಸದಸ್ಯರೊಬ್ಬರು ತಿಳಿಸಿದರು.