ಮೋದಿ ಸರಕಾರದ ನೀತಿಗೂ ಪಿಣರಾಯಿ ಸರಕಾರಕ್ಕೂ ವ್ಯತ್ಯಾಸವಿಲ್ಲ ಚೆನ್ನಿತ್ತಲ

ರಮೇಶ್ ಚೆನ್ನಿತ್ತಲ

ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ : ಕೇಂದ್ರದಲ್ಲಿ ನರೇಂದ್ರ ಮೋದಿ ಆಡಳಿತ ನಡೆಸುತ್ತಿರುವ ಜನವಿರೋಧಿ ರೀತಿಯಲ್ಲೇ ಕೇರಳದ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಕೂಡಾ ಸಾಮಾನ್ಯ ಜನತೆಯ ಮೇಲೆ ಯುಎಪಿಎ ಕಾನೂನನ್ನು ಹೇರಿಕೊಂಡು ರಾಜ್ಯದ ಜನತೆಯನ್ನು ಸಂಕಷ್ಟದಲ್ಲಿ ಸಿಲುಕಿಸುತ್ತಿದ್ದಾರೆಂದು ರಾಜ್ಯದ ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ಆರೋಪಿಸಿದರು.
ಕಾಸರಗೋಡು ಮುನ್ಸಿಪಲ್ ಕಾನ್ಪರೆನ್ಸ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಯುಡಿಎಫ್ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕ್ಷುಲ್ಲಕ ವಿಷಯಕ್ಕೂ ಯುಎಪಿಎ ಕಾನೂನನ್ನು ಹೇರುತ್ತಿರುವ ಎಡರಂಗ ಸರಕಾರ ಸಾಮಾನ್ಯ ಜನತೆಗೆ ಶಾಪವಾಗಿ ಪರಿಣಮಿಸಿರುವುದಾಗಿ ಅವರು ಪುನರುಚ್ಚಿಸಿದರು. ಕೇಂದ್ರದಲ್ಲಿ ಅಧಿಕಾರವನ್ನೇರಿದ ಬಿಜೆಪಿ ಸರಕಾರ ಸಾಮಾನ್ಯ ಜನಜೀವನದಲ್ಲಿ ಚೆಲ್ಲಾಟವಾಡುತ್ತಿರುವುದರ ಜತೆಯಾಗಿ ನರೇಂದ್ರ ಮೋದಿಯ ನೋಟು ಹಿಂತೆಗತದಿಂದ ರಾಜ್ಯದಲ್ಲಿ ದೊಡ್ಡ ಅರಾಜಕತೆ ಸೃಷ್ಟಿಯಾಗಿದೆ. 500 ಹಾಗೂ 1000 ನೋಟು ಹಿಂತೆಗೆದುದರ ಪರಿಣಾಮ ರಾಷ್ಟ್ರದ ಆರ್ಥಿಕ ವ್ಯವಸ್ಥೆಯಲ್ಲಿ ಭಾರೀ ಪರಿಣಾಮ ಬೀರಿರುವುದಾಗಿ ಅವರು ಹೇಳಿದರು. ಯುಡಿಎಫ್ ಸಂಗಮದಲ್ಲಿ ನೇತಾರರ ಸಹಿತ ಹಲವರು ಉಪಸ್ಥಿತರಿದ್ದರು