ಕೇರಳದ ಶೇ 40ರಷ್ಟು ಎಟಿಎಂಗಳಲ್ಲಿ ಕ್ಯಾಶ್ ಇಲ್ಲ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಡಿಜಿಟಲ್ ಹಣ ವ್ಯವಹಾರಕ್ಕೆ ಪೆÇ್ರೀತ್ಸಾಹ ನೀಡುವ ಉದ್ದೇಶದಿಂದ ಕರೆನ್ಸಿ ಕೋಟಾವನ್ನು ಕಡಿಮೆಗೊಳಿಸಿರುವ ರಿಸರ್ವ್ ಬ್ಯಾಂಕ್ ಕ್ರಮದಿಂದಾಗಿ ಕೇರಳದಲ್ಲಿ ಭಾರೀ ಕರೆನ್ಸಿ ನೋಟುಗಳ ಕ್ಷಾಮ ತಲೆದೋರಿದೆ.

ಕೇರಳಕ್ಕೆ ಕರೆನ್ಸಿ ನೋಟು ಪೂರೈಕೆಯಲ್ಲಿ ರಿಸರ್ವ್ ಬ್ಯಾಂಕ್ ಶೇ 25ರಷ್ಟು ಕಡಿತಗೊಳಿಸಿದೆ. ಕರೆನ್ಸಿ ನೋಟುಗಳ ಕ್ಷಾಮ ಈಸ್ಟರ್ ಹಬ್ಬ ಹಾಗು ವಿಷು ಹಬ್ಬಗಳ ಮೇಲೂ ಪರಿಣಾಮ ಬೀರತೊಡಗಿದೆ. ಅಗತ್ಯದಷ್ಟು ಹಣಕ್ಕಾಗಿ ಜನರು ಪರದಾಡುತ್ತಿರುವ ದೃಶ್ಯ ಕಂಡುಬರುತ್ತಿದೆ.

ರಾಜ್ಯದ ಶೇ 40ರಷ್ಟು ಎಟಿಎಂಗಳಲ್ಲಿ ಹಣ ಖಾಲಿಯಾಗಿದೆ. ಹೊಸ ತಲೆಮಾರು ಬ್ಯಾಂಕುಗಳು ತಮ್ಮ ಸ್ವಂತ ಖಾತೆದಾರರಿಗೆ ಮಾತ್ರವೇ ತಮ್ಮ ಎಟಿಎಂನಿಂದ ಹಣ ಹಿಂಪಡೆಯುವ ಅವಕಾಶ ನೀಡುತ್ತಿವೆ. ಹೊಸ ನೋಟುಗಳ ಆಗಮನದ ಬಳಿಕ ಬ್ಯಾಂಕುಗಳಲ್ಲಿ ಹಣ ಠೇವಣಿಯೂ ಕುಸಿದಿದೆ.