ಖುರೇಷಿ ಮೇಲೆ ದೌರ್ಜನ್ಯ ನಡೆದಿಲ್ಲ : ಕಮಿಷನರ್

ಆಯುಕ್ತ ಚಂದ್ರಶೇಖರ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ವಿಚಾರಣೆ ನೆಪದಲ್ಲಿ ವಶಕ್ಕೆ ಪಡೆದುಕೊಂಡ ಆರೋಪಿ ಮೇಲೆ ಪೊಲೀಸರು ದೌರ್ಜನ್ಯ ಎಸಗಿಲ್ಲ. ಅಲ್ಲದೆ ಖುರೇಷಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ತಾನು ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕಮಿಷನರ್ ಚಂದ್ರಶೇಖರ್ ಹೇಳಿದರು. .

ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ಪ್ರಕರಣದ ಸಮಗ್ರ ತನಿಖೆ ನಡೆಯಬೇಕಾಗಿದ್ದು, ಆ ಬಳಿಕ ನಾನು ಪ್ರತಿಕ್ರಿಯಿಸುವೆ ಎಂದಿದ್ದಾರೆ. ವೈದ್ಯಕೀಯ ವರದಿಯಂತೆ ಖುರೇಷಿ ಮೇಲೆ ಯಾವುದೇ ಪೊಲೀಸ್ ದೌರ್ಜನ್ಯ ನಡೆದಿಲ್ಲ. ನ್ಯಾಯಾಲಯಕ್ಕೆ ಹಾಜರುಪಡಿಸಿದಾಗಲೂ ಆತ ಇದನ್ನೇ ಹೇಳಿದ್ದಾನೆ. ಆತನ ಸಹೋದರ ನಿಷಾದ್ ನೀಡಿದ ದೂರಿನಂತೆ ಪೊಲೀಸ್ ದೌರ್ಜನ್ಯದ ಬಗ್ಗೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಶಾಂತರಾಜು ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎಂದರು.

 ಸಿಬ್ಬಂದಿಗೆ ಆಯುಧ

ಇನ್ನು ಮುಂದೆ ರಾತ್ರಿ ವೇಳೆ ನಗರವ್ಯಾಪ್ತಿಯಲ್ಲಿ ಬೀಟ್ ನಡೆಸುವ ಪೊಲೀಸರಿಗೆ ಆತ್ಮರಕ್ಷಣೆಗೆ ಆಯುಧ ನೀಡಲಾಗುವುದು ಎಂದು ಅವರು ಈ ಸಂದರ್ಭ ಹೇಳಿದರು.