ಸರಕಾರಿ ವಾಹನ ಚಾಲಕರ ನೇಮಕ ಇಲ್ಲವೇ

ಹೆಚ್ಚಿನ ಎಲ್ಲ ಸರಕಾರಿ ಅಧಿಕಾರಿಗಳಿಗೆ ಜೀಪು ಕಾರು ಎಲ್ಲ ಅವರ ಅಗತ್ಯ ಸರಕಾರದ ಕೆಲಸಕ್ಕೆ ಇರುತ್ತದೆ ಆದರೆ ಇತ್ತೀಚೆಗೆ ಹಲವು ಸರಕಾರಿ ಅಧಿಕಾರಿಗಳ ವಾಹನ ಚಾಲಕರಿಗೆ ನಿವೃತ್ತಿಯಾಗಿದೆ ಹೊಸ ಚಾಲಕರ ನೇಮಕಾತಿ ಇಲ್ಲದೆ ನಿವೃತ್ತಿ ಆದವರನ್ನೇ ಸರಕಾರ ನೇಮಿಸಿದೆ ಇದು ಎಷ್ಟು ಸರಿ  ಹಲವು ಮಂದಿ ಯುವಕರು ಡ್ರೈವಿಂಗ್ ಕಲಿತು ಲೈಸೆನ್ಸ್ ಮಾಡಿದರೂ ಸರಕಾರ ಏಕೆ ಚಾಲಕರ ನೇಮಕ ಮಾಡುತ್ತಿಲ್ಲ ಇದಕ್ಕೆ ಒಂದು ಉದಾಹರಣೆಯೆಂದರೆ ಪುತ್ತೂರಿನ ಸಹಾಯ ಕಮಿಷನರ್ ಜೀಪು ಚಾಲಕರಿಗೆ ನಿವೃತ್ತಿ ಆದರೂ ಪುನಃ ಅವರೇ ಜೀಪು ಚಾಲಕರಾಗಿದ್ದಾರೆ  ಮೊನ್ನೆ ಇದು ಶಾಸಕಿಗೆ ತಿಳಿದಿದೆ ಈ ಬಗ್ಗೆ ಜಿಲ್ಲಾಧಿಕಾರಿ ಗಮನಿಸಲಿ

  • ಬಿ ಕೌಶಿಕ್  ಪುತ್ತೂರು