ಬಂದರು ಮಂಡಳಿಯ ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ಭದ್ರತೆ, ಸೌಲಭ್ಯ ನೀಡಿಕೆ ಬಗ್ಗೆ

ಸಾಂದರ್ಭಿಕ ಚಿತ್ರ

ನವ ಮಂಗಳೂರು ಮಂಡಳಿಯಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಅಂದರೆ ಗುತ್ತಿಗೆದಾರರು ಬದಲಾದರೂ ಅದೇ ಕಾರ್ಮಿಕರಿಗೆ ಉದ್ಯೋಗ ಒದಗಿಸುವುದು ನ್ಯಾಯೋಚಿತ.

ಸರಕಾರ ನಿಗದಿಪಡಿಸಿದ ವೇತನವನ್ನು ಜಾರಿ ಮಾಡುವುದು ಮತ್ತು ತಿಂಗಳಿಗೆ ಸರಿಯಾಗಿ ಸಿಗುವುದೇ ಎಂದು ಗಮನಿಸುವುದು (ಸೆಪ್ಟೆಂಬರ್ ಮತ್ತು ಎಪ್ರಿಲ್ ತಿಂಗಳಲ್ಲಿ ವೇತನಗಳು ಬದಲಾಗುತ್ತಾ ಇರುತ್ತದೆ) ಅಗತ್ಯ.

ಸರಕಾರ ನಿಗದಿಪಡಿಸಿದ 8 ಗಂಟೆಯ ಕೆಲಸಕ್ಕೆ ಮಾತ್ರ ಅವಕಾಶ ಕೊಡುವುದು. ಕಲುಷಿತ ವಾತಾವರಣದಲ್ಲಿ ಮತ್ತು ಹೆಚ್ಚುವರಿ ಗಂಟೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಹೆಚ್ಚಿನ ವೇತನ ನೀಡುವುದು ಅವಶ್ಯ.

ಪಿಎಫ್, ಇಎಸ್‍ಐ, ಬೋನಸ್, ಇನ್ನಿತರ ರಕ್ಷಣಾ ಸಲಕರಣೆ (ಸಮವಸ್ತ್ರ / ಶೂ ಇತ್ಯಾದಿ)ಗಳು ಕಾರ್ಮಿಕರಿಗೆ ಸಿಗುವಂತೆ ಮಾಡಬೇಕು.

ವಾರಕ್ಕೆ ಒಂದು ದಿವಸ ಕಡ್ಡಾಯ ರಜೆ, ವರ್ಷಕ್ಕೆ ಸರಕಾರ ನಿಗದಿಪಡಿಸಿದ ಎಲ್ಲಾ ವೇತನ ಸಹಿತ ರಜೆ ನೀಡಿ.

ಮಂಗಳೂರು ರಿಫೈನರಿ ಮತ್ತು ಪೆಟ್ರೋ ಕೆಮಿಕಲ್ಸನಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುವ ಕಾರ್ಮಿಕರ ಸೌಲಭ್ಯಗಳನ್ನು ನವ ಮಂಗಳೂರು ಬಂದರು ಮಂಡಳಿ (ಎನ್‍ಎಂಪಿಟಿ) ನೀಡಬೇಕು.

ಮುಂದಿನ ದಿನಗಳಲ್ಲಿ ಈಗಿನ ಸ್ಥಿತಿಯೇ ಮುಂದುವರಿದರೆ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆಯನ್ನು ಎನ್ ಎಂ ಪಿ ಟಿ ಆಡಳಿತ ಕಚೇರಿಯ ಮುಂದೆ ಮಾಡಲು ನಿರ್ಧರಿಸಲಾಗಿದೆ.

  • ನೊಂದ ಗುತ್ತಿಗೆಕಾರ್ಮಿಕರು, ಎನ್‍ಎಂಪಿಟಿ, ಮಂಗಳೂರು