ಐಟಂ ಹಾಡಿಗೆ ಕುಣಿದ ನಿವೇದಿತಾ ಗೌಡ

ಕನ್ನಡದ `ಬಿಗ್ ಬಾಸ್’ ಮನೆಯ ಬೇಬಿ ಡಾಲ್ ಎಂದೇ ಫೇಮಸ್ ಆಗಿರುವ ನಿವೇದಿತಾ ಗೌಡ ಈಗ ಐಟೆಂ ಹಾಡಿಗೆ ಕುಣಿದ ವೀಡಿಯೋವೊಂದು ವೈರಲ್ ಆಗಿದೆ. ನಿವೇದಿತಾ ಬಿಗ್ ಬಾಸ್ ಮನೆಯಲ್ಲಿ ಡಬ್ ಸ್ಮ್ಯಾಶ್ ಮೂಲಕ ಫೇಮಸ್ ಆಗಿದ್ದಳು, ಅದಲ್ಲದೇ ಹಾಡುವುದು, ಡ್ಯಾನ್ಸ್ ಮಾಡುತ್ತಾ ಎಲ್ಲರ ಗಮನ ಸೆಳೆದಿದ್ದಳು.   ಇದೀಗ ಕತ್ರಿನಾ ಕೈಫ್ ಐಟೆಂ ಸಾಂಗ್ `ಚಿಕ್ನಿ ಚಮೇಲಿ’ ಹಾಡಿಗೆ ಆಕೆಯ ರೀತಿಯೇ ಡ್ರೆಸ್ ಧರಿಸಿ ನಿವೇದಿತಾ ಜಬರ್‍ದಸ್ತ್ ಆಗಿ ಕುಣಿದಿದ್ದಾಳೆ. ಆಕೆ ಕುಣಿತ ನೋಡಿ ಯಾರಾದರೂ ಚಿತ್ರರಂಗದ ಮಂದಿ ಅವಳನ್ನು ಐಟೆಂ ಡ್ಯಾನ್ಸಿಗೆ ಆಹ್ವಾನಿಸಿದರೂ ಅಚ್ಚರಿ ಇಲ್ಲ.

LEAVE A REPLY