ಎನೈಟಿಕೆಯ ಮಾಸ್ಟರ್ ಮೈಂಡುಗಳು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದೇಶದ ಮಾಸ್ಟರ್ ಮೈಂಡುಗಳ ಪ್ರತಿಭೆಯನ್ನು ಒರೆಗೆ ಹಚ್ಚುವ ಸವಾಲಿನ ಟಾಟಾ ಕ್ರುಸಿಬಲ್ ಕ್ಯಾಂಪಸ್ ಕ್ವಿಜ್ ಪ್ರಾದೇಶಿಕ ಸುತ್ತಿನಲ್ಲಿ ಎನ್ ಐ ಟಿ ಕೆ ವಿದ್ಯಾರ್ಥಿಗಳಾದ ಹೆಮ್ ಮುರಾಡಿಯಾ ಹಾಗೂ ರಾಹುಲ್ ವರ್ಮಾ ಪ್ರಶಸ್ತಿ ಗೆದ್ದಿದ್ದಾರೆ.

ಮಣಿಪಾಲದಲ್ಲಿ ಸೋಮವಾರ ಸಂಜೆ ನಡೆದ ಸ್ಪರ್ಧೆಯಲ್ಲಿ 38 ನಗರಗಳ 85ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು. ಹೈದರಾಬಾದಿನಲ್ಲಿ ನಡೆಯುವ ವಲಯ ಮಟ್ಟದ ಫೈನಲಿನಲ್ಲಿ ಇವರು ಭಾಗವಹಿಸುವ ಅರ್ಹತೆ ಪಡೆದಿದ್ದಾರೆ. ಒಟ್ಟು ಏಳು ತಂಡಗಳು ವಲಯ ಮಟ್ಟಕ್ಕೆ ಆಯ್ಕೆಯಾಗಿವೆ. ಮಣಿಪಾಲ್ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ)ಯ ಅನಿರುದ್ಧ್ ಕಾಮತ್ ಮತ್ತು ಅಚಿಂತ್ಯಾ ಶರ್ಮಾ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ವಿಜೇತರು ಹಾಗೂ ರನ್ನರ್ಸ್ ಕ್ರಮವಾಗಿ 75 ಸಾವಿರ ಹಾಗೂ 15 ಸಾವಿರ ರೂಪಾಯಿ ಬಹುಮಾನ ಪಡೆದರು. ರಾಷ್ಟ್ರಮಟ್ಟದ ವಿಜೇತರು 5 ಲಕ್ಷ ರೂಪಾಯಿ ನಗದು ಹಾಗೂ ಟ್ರೋಫಿ ಪಡೆಯಲಿದ್ದಾರೆ.

ಖ್ಯಾತ ಕ್ವಿಜ್ ಮಾಸ್ಟರ್ ಗಿರಿ ಬಾಲಸುಬ್ರಮಣ್ಯಂ ಅವರು ಈ ಕ್ವಿಜ್ ನಡೆಸಿಕೊಟ್ಟರು.