ತನಗಿಷ್ಟ ಬಂದವರ ಜೊತೆ ಸಹಜೀವನ ಮಾಡ್ತಾಳಂತೆ ನಿಕಿಶಾ

ನಿಕಿಶಾ ಪಟೇಲ್ ಎನ್ನುವ ಬೋಲ್ಡ್ ಬೆಡಗಿ ತೆರೆ ಮೇಲಷ್ಟೇ ಅಲ್ಲ ಖಾಸಗಿ ಬದುಕಿನಲ್ಲೂ ಬೋಲ್ಡ್. ತನ್ನ ಮದುವೆ ಬಗ್ಗೆ ನಿಕಿಶಾ ಮಾತನಾಡುತ್ತಾ “ಗಂಡ ಹೆಂಡತಿಯಾಗಿ ಬದುಕಲು ಮದುವೆ ಎಂಬ ಬಂಧನವೇ ಬೇಕಾಗಿಲ್ಲ. ಮದುವೆಯಾಗಿ ವೈವಾಹಿಕ ಜೀವನ ನಡೆಸುತ್ತಿರುವ ಪ್ರತಿಯೊಬ್ಬರೂ ಸುಖವಾಗಿದ್ದಾರೆ ಎಂಬ ನಂಬಿಕೆ ಇಲ್ಲ. 2030ರ ವೇಳೆಗೆ ನಮ್ಮ ದೇಶದಲ್ಲಿ ಮದುವೆ ಅನ್ನೋ ಬಂಧನದ ಸ್ಥಾನದಲ್ಲಿ ಸಹಜೀವನ ಬರಲಿದೆ ಎನ್ನುವುದು ನನ್ನ ಅಭಿಪ್ರಾಯ. ನಾನೂ ಅಷ್ಟೇ ನನಗೆ ಇಷ್ಟವಾದ ಹುಡುಗನೊಂದಿಗೆ ಸಹಜೀವನ ಮಾಡುತ್ತೇನೆ” ಎಂದು ಬೋಲ್ಡ್ ಹೇಳಿಕೆ ನೀಡಿದ್ದಾಳೆ.
ನಿಕಿಷಾ `ನರಸಿಂಹ’, `ಡಕೋಟಾ ಪಿಕ್ಚರ್’, `ವರದನಾಯಕ’, `ನಮಸ್ತೆ ಮೇಡಂ’, `ಅಲೋನ್’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಳು. ಕ್ರೇಜಿಸ್ಟಾರ್ ರವಿಚಂದ್ರನ್ `ನರಸಿಂಹ’ ಸಿನಿಮಾ ನೋಡಿದವರಿಗೆ ನಿಕಿಷಾಳ ಹಾಟ್ ಹಾಟ್ ಸೀನ್ ಇನ್ನೂ ನೆನಪಿರಬಹುದು. ತೆಲುಗು, ತಮಿಳು ಸಿನಿಮಾದಲ್ಲಿಯೂ ನಟಿಸಿರುವ ನಿಕಿಷಾಗೆ ತಮಿಳಿನಲ್ಲಂತೂ ಸಿಕ್ಕಾಪಟ್ಟೆ ಫ್ಯಾನ್ ಫಾಲೋಯಿಂಗ್ ಇದೆ.