ನಿಖಿಲ್ ನಾಯಕಿಯಾಗಿ ರಚಿತಾ

ಕುಮಾರಸ್ವಾಮಿ ಪುತ್ರ ನಿಖಿಲ್ ಈಗ ಇನ್ನೊಂದು ಸಿನಿಮಾದಲ್ಲಿ ನಟಿಸಲಿದ್ದಾನೆ. ಸದ್ಯ ನಿಖಿಲ್ `ಕುರುಕ್ಷೇತ್ರ’ ಸಿನಿಮಾದಲ್ಲಿ ಅಭಿಮನ್ಯು ಆಗಿ ನಟಿಸುತ್ತಿದ್ದು ಆ ಚಿತ್ರದಲ್ಲಿ ಆತನ ಭಾಗದ ಶೂಟಿಂಗ್ ಹೆಚ್ಚೂಕಡಿಮೆ ಮುಗಿದಿದೆ. ಇದೀಗ ಕೊರಿಯೋಗ್ರಾಫರ್ ಟರ್ನಡ್ ಡೈರೆಕ್ಟರ್ ಎ.ಹರ್ಷ ಆಕ್ಷನ್ ಕಟ್ ಹೇಳಲಿರುವ `ಸೀತಾರಾಮ ಕಲ್ಯಾಣ’ ಎನ್ನುವ ಚಿತ್ರದಲ್ಲಿ ಆತ ನಟಿಸಲಿದ್ದು ಕಳೆದ ವಾರವಷ್ಟೇ ಕುಮಾರಸ್ವಾಮಿ ದಂಪತಿಗಳು ಆ ಚಿತ್ರಕ್ಕೆ ಕ್ಲಾಪ್ ಮಾಡಿದ್ದರು.

ಈ ಸಿನಿಮಾಗೆ ನಾಯಕಿ ಹುಡುಕಾಟ ನಡೆದಿದ್ದು ಡಿಂಪಲ್ ಕ್ವೀನ್ ರಚಿತಾರಾಮ್ ಈಗ ಆಯ್ಕೆಯಾಗಿದ್ದಾಳೆ. ಕನ್ನಡದ ನಾಯಕಿಗೇ ಮಣೆ ಹಾಕಲು ಹರ್ಷ ಬಯಸಿದ್ದು ಅದರಂತೆ ರಚಿತಾ `ರಾಮ’ ನಿಖಿಲ್‍ಗೆ ಸೀತೆಯಾಗುತ್ತಿದ್ದಾಳೆ.

ಸದ್ಯ ರಚಿತಾ `ಜಾನಿ ಜಾನಿ ಯಸ್ ಪಪ್ಪಾ’ಹಾಗೂ `ಅಯೋಗ್ಯ’ ಚಿತ್ರಗಳಲ್ಲಿ ನಟಿಸುತ್ತಿದ್ದಾಳೆ.