ಚಾಮುಂಡಿ ಬೆಟ್ಟದಲ್ಲಿ ರಾತ್ರಿ ಸಂಚಾರ ರದ್ದು

ಮೈಸೂರು : ಇನ್ನು ಮುಂದೆ ಚಾಮುಂಡಿ ಬೆಟ್ಟಕ್ಕೆ ರಾತ್ರಿ 10 ಗಂಟೆಯ ನಂತರ ಪ್ರಯಾಣಿಸುವ ಅವಕಾಶ ಸಿಗುವುದಿಲ್ಲ. ಈ ಪ್ರಾಂತದಲ್ಲಿ ಅಕ್ರಮ ಚಟುವಟಿಕೆಗಳಿಗೆ ಇತಿಶ್ರೀ ಹಾಡಲು ಮೈಸೂರು ಪೊಲೀಸರು ರಾತ್ರಿ ವೇಳೆ ದೇವಸ್ಥಾನಕ್ಕೆ ಹೋಗುವ ಭಕ್ತಾದಿಗಳ ಮೇಲೆ ನಿಷೇಧ ಹೇರಲು ನಿರ್ಧರಿಸಿದ್ದಾರೆ. ಜಿಲ್ಲಾಡಳಿತ ಅಧಿಕಾರಿಗಳು ಮತ್ತು ಪೊಲೀಸರ ನಡುವಿನ ಸಭೆಯಲ್ಲಿ ಭಕ್ತರ ಸುರಕ್ಷೆ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇತ್ತೀಚೆಗೆ ಜರ್ಮನ್ ಪ್ರಜೆಯೊಬ್ಬರ ಮೇಲೆ ನಂದಿ ಪ್ರತಿಮೆ ಬಳಿ ದೌರ್ಜನ್ಯ ನಡೆಸಲಾಗಿತ್ತು. ಇಬ್ಬರು ಬೈಕವಾಲಾಗಳು ಯುವಕನ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದರು. ಸಿಸಿಟಿವಿ ಕ್ಯಾಮರಾಗಳು ಅಥವಾ ಸಿಬ್ಬಂದಿಗಳಿಲ್ಲದೆ ಅಪರಾಧಿಗಳ ಪತ್ತೆಯಾಗಿಲ್ಲ. ಇದೀಗ ಬೆಟ್ಟದ ಪ್ರವೇಶ ದ್ವಾರಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ.

ನಿಷೇಧದ ಬಗ್ಗೆ ಜನರಿಗೆ ಮಾಹಿತಿ ನೀಡಲು ಬೋರ್ಡ್ ಅಳವಡಿಸಲಾಗುತ್ತದೆ. ಜಿಲ್ಲಾಧಿಕಾರಿ ಈ ನಿರ್ಧಾರವನ್ನು ಅಂಗೀಕರಿಸಲು ಪೊಲೀಸರು ಕಾಯುತ್ತಿದ್ದಾರೆ. ನಾಲ್ಕು ಸ್ಥಳಗಳಲ್ಲಿ ಗೇಟ್ ಅಳವಡಿಸಿ ಭದ್ರತೆಯನ್ನು ಬಿಗಿಗೊಳಿಸಲು ನಿರ್ಧರಿಸಲಾಗಿದೆ. ಪಾಲಿಕೆ ಅಧಿಕಾರಿಗಳಿಗೆ ಗೇಟ್‍ಗಳನ್ನು ಅಳವಡಿಸುವ ಜವಾಬ್ದಾರಿ ಕೊಡಲಾಗಿದೆ. ಜೊತೆಗೆ ಜನಸಂಚಾರವನ್ನು ಪತ್ತೆ ಮಾಡಲು ಚಾಮುಂಡಿ ಬೆಟ್ಟದಲ್ಲಿ ಹಲವೆಡೆ ಸಿಸಿಟಿವಿಗಳನ್ನೂ ಅಳವಡಿಸಲಾಗುವುದು.