ಮದ್ಯದಂಗಡಿ ಸ್ಥಳಾಂತರ : ಪ್ರತಿಭಟನೆ 13ನೇ ದಿನಕ್ಕೆ

ಕಾಸರಗೋಡು : ಕುಂಬಳೆಯ ರಾಜ್ಯ ಬಿವರೇಜಸ್ ಕಾಪೆರ್Çೀರೇಶನ್‍ಮದ್ಯದಂಗಡಿಯನ್ನು ನಾರಾಯಣಮಂಗಲಕ್ಕೆ ಸ್ಥಳಾಂತರಿಸುವ ವಿರುದ್ಧ ಜನಪರ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಪ್ರತಿಭಟನೆ ಬುಧವಾರ 13ನೇ ದಿನಕ್ಕೆ ಕಾಲಿರಿಸಿದ್ದು, ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ಮುಕ್ತ ಬೆಂಬಲ ವ್ಯಕ್ತಪಡಿಸಿವೆ.

ಪ್ರತಿಭಟನೆ ನಡೆಯುತ್ತಿರುವ ನಾರಾಯಣಮಂಗಲಕ್ಕೆ ಆಗಮಿಸಿದ ಜಿಲ್ಲಾ ಪಂಚಾಯತಿ ಅಧ್ಯಕ್ಷ ಬಶೀರ್ ಬೆಂಬಲ ವ್ಯಕ್ತಪಡಿಸಿ ಸಂಪೂರ್ಣ ಸಹಕಾರದ ಭರವಸೆ ನೀಡಿದ್ದಾರೆ.

ಬಳಿಕ ಅವರು ಮಾತನಾಡಿ, “ಸ್ಥಳೀಯ ನಿವಾಸಿಗಳಿಗೆ, ಜನರ ನಂಬಿಕೆಗಳಿಗೆ ದ್ರೋಹವೆಸಗುವ ಯಾವುದೇ ಕ್ರಮಕ್ಕೆ ಉಗ್ರವಾಗಿ ಪ್ರತಿಭಟಿಸಬೇಕಾಗಿದೆ. ಸಮಾಜ, ಕುಟುಂಬ ಸ್ವಾಸ್ಥ್ಯಕ್ಕೆ ಸವಾಲಾಗುವ ಮದ್ಯದಂಗಡಿ ತೆರೆಯಲು ಯಾವ ಕಾರಣಕ್ಕೂ ಅವಕಾಶ ಕೊಡಬಾರದು. ಪಕ್ಷ, ಜಾತಿ, ಮತಗಳನ್ನು ಮೀರಿ ಎಲ್ಲರೂ ಒಗ್ಗಟ್ಟಾಗಿ ಹೋರಾಡುವ ಅಗತ್ಯವಿದೆ” ಎಂದರು.