ಆತ್ಮಹತ್ಯೆ ಮಾಡಿಕೊಂಡ ಲಾಡ್ಜಲ್ಲಿ ಬುಲೆಟ್ ಪತ್ತೆ !

ಗಣಪತಿ ಆತ್ಮಹತ್ಯೆಗೆ ಹೊಸ ಟ್ವಿಸ್ಟ್

ನಮ್ಮ ಪ್ರತಿನಿಧಿ ವರದಿ

ಮಡಿಕೇರಿ : ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ. ಗಣಪತಿ ಆತ್ಮಹತ್ಯೆ ಮಾಡಿಕೊಂಡಿರುವ ಗಣಪತಿ ಗುಂಡು ಹೊಡೆದುಕೊಂಡಿದ್ದರು ಎಂದು ಹೇಳಲಾದ ಮಡಿಕೇರಿಯ ಲಾಡ್ಜ್‍ನ ಕೊಠಡಿಯಲ್ಲಿ ಗುಂಡು ಪತ್ತೆ ಹೆಚ್ಚಿದ್ದಾರೆ.

ಲಾಡ್ಜ್ ಕೊಠಡಿಯಲ್ಲಿ ಮಂಗಳವಾರದಂದು ತಪಾಸಣೆ ನಡೆಸಿದ ವೇಳೆ ಈ ಗುಂಡು ಲಭಿಸಿದ್ದು ಘಟನೆ ನಡೆದು ಬರೋಬ್ಬರಿ 1 ವರ್ಷ 4 ತಿಂಗಳ ಬಳಿಕ ಈ ಗುಂಡು ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ.

2016ರ ಜುಲೈ ತಿಂಗಳಿನಲ್ಲಿ ಗಣಪತಿ ತಾವು ತಂಗಿದ್ದ ಹೊಟೇಲಿನಲ್ಲಿ ನಿಗೂಢ ರೀತಿಯಲ್ಲಿ ಸಾವಿಗೀಡಾಗಿದ್ದರು. ಅಂದು ಸ್ಥಳೀಯ ಪೊಲೀಸರು, ರಾಜ್ಯ ಸಿಐಡಿ ಪೊಲೀಸರು ಇದೇ ಹೊಟೇಲಿನಲ್ಲಿ ತಪಾಸಣೆ ನಡೆಸಿ ಎಲ್ಲಾ ಸೊತ್ತುಗಳನ್ನೂ ಪರಿಶೀಲನೆ ನಡೆಸಿದ್ದರು.