ನಗರ ರೈಲ್ವೆ ನಿಲ್ದಾಣದಲ್ಲಿ ಹೊಸ ಸ್ವೈಪಿಂಗ್ ಉಪಕರಣ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದಕ್ಷಿಣ ರೈಲ್ವೇ ಪಲಕ್ಕಾಡ್ ವಿಭಾಗವು ಹೆಚ್ಚುವರಿಯಾಗಿ ಹೊಸ ಸ್ವೈಪಿಂಗ್ ಉಪಕರಣವನ್ನು ಮಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಪರಿಚಯಿಸಿದೆ. ಈಗಾಗಲೇ ನೋಟು ಅಮಾನ್ಯಗೊಂಡಿರುವ ಹಿನ್ನಲೆಯಲ್ಲಿ ನಗರದ ಜನರು ಪರದಾಡುವಂತೆ ಮಾಡಿದೆ. ಆದ್ದರಿಂದ ನಗದುರಹಿತ ವ್ಯವಹಾರ ಮಾಡುವ ನಿಟ್ಟಿನಲ್ಲಿ ಈ ಸೌಲಭ್ಯವನ್ನು ಒದಗಿಸಲಾಗಿದ್ದು ಪ್ರಯಾಣಿಕರು ತಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಟಿಕೆಟ್ ಪಡೆದುಕೊಳ್ಳಬಹುದಾಗಿದೆ.

ನಗರದ ಪ್ರಯಾಣಿಕರು ಈಗ ನಗದು ರಹಿತ ವ್ಯವಹಾರಕ್ಕೆ ಕಾರ್ಡ್ ಬಳಸಿ ಯೋಜನೆಗೆ ಸಮ್ಮಿತಿ ಸೂಚಿಸಿದ್ದಾರೆ. ಈ ರೀತಿಯಾಗಿ ನಗದು ರಹಿತ ವ್ಯವಹಾರಕ್ಕೆ ನಗರದ ರೈಲು ನಿಲ್ದಾಣದಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಪ್ರತಿಕ್ರಿಯೆ ದೊರೆತಿದೆ ಎಂದು ಮೂಲಗಳು ತಿಳಿಸಿವೆ.

ಸ್ವೈಪಿಂಗ್ ಉಪಕರಣದ ಉಪಯೋಗ

  • ರು 5 ಯಿಂದ ರು 1000 ಗಳ ನೋಟುಗಳನ್ನು ಬಳಸಿ ಟಿಕೆಟ್ ಪಡೆಯಬಹುದು (ಆದರೆ ಒದ್ದೆಯಾದ ನೋಟು, ಹರಿದ ನೋಟುಗಳನ್ನು ಬಳಸುವಂತಿಲ್ಲ)
  • ನಾಣ್ಯಗಳನ್ನೂ ಬಳಸಿ ಟಿಕೆಟ್ ಪಡೆಯಬಹುದು (ಒಂದು ರೂಪಾಯಿ, ಎರಡು ರೂ. ನಾಣ್ಯಗಳನ್ನು ಹೊರತುಪಡಿಸಿ ರು 5 ಮತ್ತು ರು 10 ನಾಣ್ಯಗಳನ್ನು ಬಳಸಬಹುದು)
  • ಈ ಉಪಕರಣ ಕೇವಲ ಇಲ್ಲಿನ ನಗದು ಮಾತ್ರ ಸ್ವೀಕರಿಸುತ್ತದೆ.
  • ಏನಾದರೂ ಹಣ ವಿನಿಮಯದಲ್ಲಿ ಸಮಸ್ಯೆಯಾದರೆ ಕೌಂಟರ್ ಬಳಿ ತಿಳಿಸಬಹುದಾಗಿದೆ
  • ಒಂದರ ಬಳಿಕ ಒಂದು ನೋಟುಗಳನ್ನು ಉಪಕರಣದ ಒಳಗೆ ಹಾಕಬಹುದಾಗಿದೆ.
  • ಹಣ ಹಾಕುವ ಸಂದರ್ಭ ಉಪಕರಣ ಹಸಿರು ಬಣ್ಣದ ನಿಶಾನೆ ತೋರಿಸುತ್ತದೆ.
  • ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‍ಗಳನ್ನು ಬಳಸಿ ಟಿಕೆಟ್ ಪಡೆಯಬಹುದು.