6.90 ಕೋಟಿ ರೂ ವೆಚ್ಚದಲ್ಲಿ ನೂತನ ಪೊಲೀಸ್ ವಸತಿಗೃಹ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಹೊರವಲಯದ ಶಕ್ತಿನಗರದಲ್ಲಿ 6.90 ಕೋಟಿ ರೂ ವೆಚ್ಚದಲ್ಲಿ ಪೊಲೀಸ್ ವಸತಿಗೃಹ  ನಿರ್ಮಾಣವಾಗಲಿದ್ದು, 24 ಪಿಸಿ ಹಾಗೂ 8 ಎಸೈಗಳಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲಿದೆ.

ನೂತನ ಪೆÇಲೀಸ್ ವಸತಿಗೃಹಗಳ ಕಟ್ಟಡಕ್ಕೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಶಿಲಾನ್ಯಾಸ ನೆರವೇರಿಸಿ ಫಲಕ ಅನಾವರಣಗೊಳಿಸಿದರು.

ರಾಜ್ಯ ಸರಕಾರ ಪೆÇಲೀಸ್ ವಸತಿ ಗೃಹ 2020 ಯೋಜನೆಯಡಿ ಐದು ವರ್ಷದಲ್ಲಿ ವಿವಿಧ ಜಿಲ್ಲೆಗಳಲ್ಲಿ 11,000 ವಸತಿ ಗೃಹ ನಿರ್ಮಾಣ ಮಾಡಲು ಅನುಮೋದನೆ ನೀಡಿದೆ. 2500ಕ್ಕೂ ಅಧಿಕ ಮನೆಗಳನ್ನು ಈಗಾಗಲೇ ಹಸ್ತಾಂತರಿಸಲಾಗಿದೆ. 4500 ಮನೆಗಳು ಕಾಮಗಾರಿ ಮುಗಿಯುವ ಹಂತದಲ್ಲಿದೆ. ಈ ವರ್ಷ 4500 ಮನೆಗಳ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಮಂಗಳೂರು ನಗರದಲ್ಲಿ ಒಟ್ಟು 160 ವಸತಿಗೃಹ ಮಂಜೂರಾಗಿದ್ದು, ನಿರ್ಮಾಣ ಕೆಲಸ ನಡೆಯುತ್ತಿದೆ. ಈ ಬಾರಿಯ ಬಜೆಟಿನಲ್ಲಿ ಹೊಸ ಮನೆಗಳ ನಿರ್ಮಾಣದ ಜತೆಗೆ ಹಳೆಯ ಮನೆಗಳ ದುರಸ್ತಿಗೆ ಆದ್ಯತೆ ನೀಡಲಾಗುತ್ತಿದೆ. 16 ತಿಂಗಳಲ್ಲಿ ಈ ವಸತಿಗೃಹದ ಕಾಮಗಾರಿ ಪೂರ್ಣಗೊಳ್ಳಲಿದೆ.

ರಾಜ್ಯದಲ್ಲಿ 28,000 ಪೆÇಲೀಸ್ ಸಿಬ್ಬಂದಿ ನೇಮಕವಾಗಿದೆ. 1,642 ಎಸೈ ಹುದ್ದೆಗಳ ಭರ್ತಿಯಾಗಿದೆ. ಇನ್ನೂ 18,000 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಂಡು ಅನುಮತಿ ನೀಡಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಬೆಳಗಾವಿಗೆ ವಿಶೇಷ ಆದ್ಯತೆ ನೆಲೆಯಲ್ಲಿ ನೇಮಕಾತಿ ಮಾಡಲಾಗುತ್ತಿದೆ ಎಂದು ರೆಡ್ಡಿ ತಿಳಿಸಿದರು.

 

LEAVE A REPLY