ಬ್ಯಾಂಕಿಗೆ ಬಂದ ಹಣ ಕಾಳಧನಿಕರ ಮನೆಯಲ್ಲಿ

ಈಗ ಯಾವ ಬ್ಯಾಂಕಿಗೆ ಹೋದರೂ ಕ್ಯಾಶ್ ಇಲ್ಲ. ಎಟಿಎಂ ಓಪನ್ ಇಲ್ಲವೇ ಇಲ್ಲ. ಇದ್ದರೂ ಕ್ಯಾಶ್ ಇಲ್ಲ. 2000 ರೂ ನೋಟು ಪುಣ್ಯದಲ್ಲಿ ಸಿಕ್ಕರೂ ನಿಮ್ಮ ಜೀವಮಾನದಲ್ಲಿ 2000ಕ್ಕೆ ಚಿಲ್ಲರೇ ಇಲ್ಲವೇ ಇಲ್ಲ. ಯಾಕೆಂದ್ರೆ ಇಷ್ಟರವರಗೆ ಹೇಳಿದ್ದು ಬ್ಯಾಂಕಿಗೆ ಬಂದ ಹಣವೆಲ್ಲ ಶ್ರೀಮಂತರಲ್ಲಿ ಕಾಳಧನಿಕರ ಮನೆಯಲ್ಲಿ ಭದ್ರ. ಇನ್ನು ಸಾಮಾನ್ಯನ ಪರಿಸ್ಥಿತಿ ಆ ದೇವರೇ ಬಲ್ಲ. ಇದರಲ್ಲಿ ಸಚಿವರೂ, ಎಂಪಿಗಳೂ ದೊಡ್ಡ ಕುಳಗಳೇ ಇದರ ಪಾಲುದಾರರು. ಇನ್ನಾದರೂ ಜನರಿಗೆ  ಹಣ ನೀಡುವವರು ಯಾರು ? ಈ ರೀತಿ ಹಣ ಬಚ್ಚಿಟ್ಟಿರುವ ತಿಮಿಂಗಿಲಗಳಿಗೆ ಯಾರು ಬೆಂಬಲರಾಗಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಯವರು ಕೂಲಂಕುಷ ತನಿಖೆ ನಡೆಸಲಿ.

  • ಮುರಾರಿ ಪುತ್ತೂರು