ರಿಷಬ್ ಶೆಟ್ಟಿ ಹೊಸ ಚಿತ್ರ `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’

ನಮ್ಮ ಕುಂದಾಪುರದ ನಿರ್ದೇಶಕ ಕಮ್ ನಟ ರಿಷಬ್ ಶೆಟ್ಟಿ ಈಗ ಇನ್ನೊಂದು ಸಿನಿಮಾ ಮಾಡಲು ರೆಡಿಯಾಗಿದ್ದಾರೆ. `ಕಿರಿಕ್ ಪಾರ್ಟಿ’ಯ ಭಾರೀ ಸಕ್ಸಸ್ ಬಳಿಕ ರಿಷಬ್ ಇನ್ನೊಂದು ವಿಭಿನ್ನ ಚಿತ್ರಕ್ಕೆ ತಯಾರಿ ನಡೆಸಿದ್ದಾರೆ. ಅವರ ಹೊಸ ಚಿತ್ರದ ಹೆಸರು `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’. ಈ ಚಿತ್ರಕ್ಕಾಗಿ ಹೆಚ್ಚಿನ ಪ್ರಿಪ್ರೊಡಕ್ಷನ್ ವರ್ಕ್ ಮುಗಿಸಿರುವ ರಿಷಬ್ ಈಗ ಚಿತ್ರದ ನಟ ನಟಿಯರಿಗಾಗಿ ಹುಡುಕಾಟ ನಡೆಸಿದ್ದಾರೆ. ಇದೇ 13 ರಂದು ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ ಕೂಡ್ಲುವಿನಲ್ಲಿ ಆಡಿಷನ್ ನಡೆಯಲಿದೆ. ಈ ಬಗ್ಗೆ ಅನೌನ್ಸ್‍ಮೆಂಟ್ ಕೂಡಾ ನೀಡಿದ್ದಾರೆ.

ರಿಷಬ್ ಪ್ರತಿಭೆಗೆ ಮೊದಲ ಆದ್ಯತೆ ನೀಡುತ್ತಾರೆ. ಅದಲ್ಲದೇ ಆಯಾ ಪ್ರದೇಶದ ಜನರಿಗೂ ಅವಕಾಶ ನೀಡುತ್ತಾರೆ. ಈ ಬಾರಿ ಅವರು ಹಳ್ಳಿಗಾಡಿನ ಶಾಲಾ ಮಕ್ಕಳ ಸಮಸ್ಯೆಗಳ ಕುರಿತು ಚರ್ಚಿಸಲಿದ್ದು ಎಲ್ಲಾ ವರ್ಗದ ಜನರಿಗೆ ಹಿಡಿಸುವಂತಹ ಚಿತ್ರ ತರುವ ಯೋಜನೆ ಹಾಕಿಕೊಂಡಿದ್ದಾರೆ ರಿಷಬ್.