ಚೀನಾಕ್ಕೆ ನೀಡಿದ್ದ ಜಲವಿದ್ಯುತ್ ಯೋಜನೆ ರದ್ದುಪಡಿಸಿದ ನೇಪಾಳ

 ಕಾಠ್ಮಂಡು : ಚೀನಾದ ಸರಕಾರಿ ಒಡೆತನದ ಕಂಪೆನಿಯೊಂದಕ್ಕೆ 1,200 ಮೆವಾ ಜಲವಿದ್ಯುತ್ ಯೋಜನೆ ನಿರ್ಮಿಸಲು ನೀಡಲಾಗಿದ್ದ ಗುತ್ತಿಗೆಯೊಂದನ್ನು ಸೋಮವಾರ ನೇಪಾಳ ರದ್ದುಪಡಿಸಿ, ಅಲ್ಲಿ ಕೆಲವೊಂದು ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕೆಂದಿದ್ದ ಚೀನಾದ ಆಸೆಗೆ ತಣ್ಣೀರೆರಚಿದೆ. ಬುದ್ದಿ ಗಂಡಕಿ ಜಲವಿದ್ಯುತ್ ಯೋಜನೆ ಜಾರಿಯನ್ನು  ಚೀನಾದ ಗೆಝಹೌಬ ಸಮೂಹಕ್ಕೆ ನೀಡಲು ಉದ್ದೇಶಿಸಲಾಗಿದ್ದರೆ ಅದನ್ನು ಹಲವಾರು ಸಂಸದೀಯ ಸಮಿತಿಗಳ ಶಿಫಾರಸಿನಂತೆ  ಅಲ್ಲಿನ ಸಚಿವ ಸಂಪುಟ ಸೋಮವಾರ ರದ್ದುಗೊಳಿಸಿದೆ.