ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿ ಸಾವು

ಸಿಬ್ಬಂದಿ ನಿರ್ಲಕ್ಷ್ಯ ಆರೋಪ

ನಮ್ಮ ಪ್ರತಿನಿಧಿ ವರದಿ

ಕುಮಟಾ : ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾದ ರೋಗಿಯೊಬ್ಬರು ಮೃತರಾಗಿದ್ದು, ಮೃತರ ಮನೆಯವರು ಆಸ್ಪತ್ರೆಯವರ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಕಲಸಂಕದ ನಿವಾಸಿ ದಾಮೋದರ ನಾಯ್ಕ (74) ಎನ್ನುವವರಿಗೆ ಇದ್ದಕಿದ್ದಂತೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಸರಕಾರಿ ಆಸ್ಪತ್ರೆಗೆ ಅಂಬುಲೆನ್ಸಲ್ಲಿ ಕರೆದುಕೊಂಡು ಬಂದಿದ್ದರು. ಅಲ್ಲಿರುವ ವೈದ್ಯರೊಬ್ಬರು ಅವರಿಗೆ ಚಿಕಿತ್ಸೆ ನೀಡಿದ್ದು, ಅವರು ಸ್ವಲ್ಪ ಗುಣಮುಖರಾಗಿದ್ದರು. ನಂತರ ಕೆಲ ಹೊತ್ತಿನಲ್ಲೇ ಮತ್ತೆ ಸಮಸ್ಯೆ ಉಲ್ಬಣವಾಗಿದ್ದು, ಆ ಸಂದರ್ಭ ಯಾವುದೇ ವೈದ್ಯರಿರಲಿಲ್ಲ. ತಮ್ಮ ತಂದೆಯವರಿಗೆ ಮತ್ತೆ ಆರೋಗ್ಯ ಕೆಟ್ಟಿದೆ ಎಂದು ಕೇಳಿಕೊಂಡರೂ ಆಸ್ಪತ್ರೆಯ ಒಂದಿಬ್ಬರು ಸಿಬ್ಬಂದಿ ಮಾತ್ರ ಸಹಾಯಕ್ಕೆ ಬಂದಿದ್ದು, ಬೇರೆಯವರೆಲ್ಲ ನಿರ್ಲಕ್ಷ್ಯದಿಂದ ನೋಡುತ್ತಲೇ ಕುಳಿತಿದ್ದರು. ಕೊನೆಗೂ ರೋಗಿ ಕೊನೆ ಉಸಿರೆಳೆದರು. ಇದಕ್ಕೆಲ್ಲಾ ಸರ್ಕಾರಿ ಆಸ್ಪತ್ರೆಯ ನರ್ಸುಗಳ ನಿರ್ಲಕ್ಷ್ಯವೇ ಕಾರಣ ಎಂದು ಮೃತ ದಾಮೋದರ ನಾಯ್ಕ ಅವರ ಮಗ ಪ್ರಶಾಂತ ನಾಯ್ಕ ಆರೋಪಿಸಿದ್ದಾರೆ.

LEAVE A REPLY