ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಶುಶ್ರೂಷೆಯಲ್ಲಿ ನಿರ್ಲಕ್ಷ್ಯ ಸರಿಯಲ್ಲ

ಖಾಸಗಿ ಆಸ್ಪತ್ರೆಗಳಲ್ಲಿ ಕಾನೂನು ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆ ಇತ್ತು. ಆದರೆ ಈಗ ದಂಡ ಮಾತ್ರ ಎಂಬ ಕಾಯ್ದೆ ಜಾರಿಗೆ ಬಂದಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಸಮಸ್ಯೆಗಳು ಅವಘಡಗಳು ಸಂಭವಿಸುತ್ತಿರುವುದು ಸರಕಾರಿ ಆಸ್ಪತ್ರೆಗಳಲ್ಲಿಯೇ ಮಕ್ಕಳ ಕಳವು ಮಕ್ಕಳ ಬದಲಾವಣೆ ಮಾಡುವುದು ಸರಕಾರಿ ಆಸ್ಪತ್ರೆಗಳಲ್ಲಿಯೇ ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಾಗ ಫೋನಿನಲ್ಲಿ ಮಾತನಾಡುವುದು ರೋಗಿಗಳಿಗೆ ದುಬಾರಿ ಜೌಷಧಗಳಿಗೆ ಚೀಟಿ ಬರೆದು ಹೊರಗಿನ ಮೆಡಿಕಲುಗಳಿಂದ ಔಷಧಿ ತರಿಸುವುದು ಅನೇಕ ಕಡೆ ಇಂತಹ ಎಡವಟ್ಟುಗಳು ನಡೆಯುತ್ತಲೇ ಇವೆ ಸರಕಾರ ಇದಕ್ಕೆಲ್ಲ ಕಡಿವಾಣ ಹಾಕಬೇಕು ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು ಹಣ ಪಾವತಿಸುವುದರಿಂದ ಅಲ್ಲಿ ರೋಗಿಗಳನ್ನು ಮುತುವರ್ಜಿಯಿಂದ ನೋಡಿಕೊಳ್ಳುತ್ತಾರೆ ಆದ್ದರಿಂದ ದಂಡ ವಿಧಿಸುವುದು ಖಾಸಗಿ ಆಸ್ಪತ್ರೆಗಳಿಗೆ ಮಾತ್ರ ಸೀಮಿತವಾಗದಿರಲಿ ಸರಕಾರ ಆಸ್ಪತ್ರೆಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ ರೋಗಿಗಳ ಬಗ್ಗೆ ನಿರ್ಲಕ್ಷ್ಯ ಭಾವನೆ ಹೋಗಲಿ

  • ಅವಿನಾಶ್ ಎಂ  ಮಂಗಳೂರು