ಮುಲ್ಕಿ ತಹಶೀಲ್ದಾರ್ ಕಚೇರಿಯಲ್ಲಿ ಅರ್ಧಕ್ಕೆ ಇಳಿಯದ ರಾಷ್ಟ್ರ ಧ್ವಜ

ಮುಲ್ಕಿ ವಿಶೇಷ ತಹಶೀಲ್ದಾರ್ ಕಚೇರಿ

ಸಹಕಾರಿ ಸಚಿವ ನಿಧನದ ಹಿನ್ನೆಲೆ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ರಾಜ್ಯ ಸರಕಾರದ ಸಹಕಾರ ಸಚಿವ ಎಚ್ ಎಸ್ ಮಹದೇವಪ್ರಸಾದ್ ನಿಧನದ ಹಿನ್ನೆಲೆಯಲ್ಲಿ ಸರಕಾರ ರಾಜ್ಯಾದ್ಯಂತ ಶಾಲಾ ಕಾಲೇಜು ಹಾಗೂ ಸರಕಾರಿ ಕಚೇರಿಗಳಿಗೆ ರಜೆ ಘೋಷಿಸಿದ್ದಲ್ಲದೆ ಸರಕಾರಿ ಕಚೇರಿಗಳಲ್ಲಿ ಶೋಕಾಚರಣೆ ನಿಮಿತ್ತ ಅರ್ಧಮಟ್ಟಕ್ಕೆ ರಾಷ್ಟ್ರ ಧ್ವಜ ಹಾರಿಸಬೇಕೆಂದು ಸೂಚನೆ ನೀಡಿತ್ತು. ಆದರೆ ಮುಲ್ಕಿ ಹೋಬಳಿಯ ವಿಶೇಷ ತಹಶೀಲ್ದಾರ ಕಚೇರಿಯಲ್ಲಿ ರಾಷ್ಟ್ರ ಧ್ವಜ ಹಾರಿಸದೆ ಸರಕಾರದ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಾರ್ನಾಡು ಗಾಂಧಿ ಮೈದಾನದ ಬಳಿಯಲ್ಲಿರುವ ವಿಶೇಷ ತಹಶೀಲ್ದಾರ ಕಚೇರಿಯ ಸಿಬ್ಬಂದಿ ಕೇವಲ ರಜೆಯ ಮಜಾ ಮಾತ್ರ ಅನುಭವಿಸಿದ್ದಾರೆ ವಿನಃ ಕಚೇರಿಯ ಎದುರುಗಡೆ ಇರುವ ಧ್ವಜಸ್ಥಂಭದಲ್ಲಿ ರಾಷ್ಟ್ರ ಧ್ವಜ ಅರ್ಧ ಮಟ್ಟಕ್ಕೆ ಹಾರಿಸಿ ಮೃತರಿಗೆ ಗೌರವ ಸೂಚಿಸಿಲ್ಲ. ಮುಲ್ಕಿ ಹೋಬಳಿಯ ಕೆಲ ಖಾಸಗಿ ಶಾಲೆಗಳಿಗೆ ರಜೆ ಕೊಡದೆ ಸರಕಾರದ ಆದೇಶವನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಕೂಡ ಕೇಳಿಬಂದಿದೆ.