ದೇಶ ವಿಘಟನೆ ಹಾದಿಯಲ್ಲಿದೆ : ಪ್ರಣಬ್ ಆತಂಕ

ದೇಶವು ರಾಜ್ಯ ಅಥವಾ ಪ್ರಾಂತ ಅಥವಾ ಸಣ್ಣ ಘಟಕಗಳಾಗಿ ವಿಘಟನೆಯ ಹಾದಿಯಲ್ಲಿದೆ ಮತ್ತು ಅವು ಪರಸ್ಪರರ ವಿರುದ್ಧ ಶತ್ರುತ್ವ, ಅಸಹಕಾರ ತೋರುತ್ತಿವೆ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜೀ ಹೇಳಿದ್ದಾರೆ. “ದೇಶವು ವಿಘಟನೆಯ ಹಾದಿಯಲ್ಲಿದೆಯೇ ಎಂದು ಕಾಣುತ್ತಿದೆ. ದೇಶವೇ ವಿಭಜನೆಯಾದ ಮೇಲೆ ರಾಜಕೀಯ ಮಾಡಿ ಏನು ಪ್ರಯೋಜನ” ಎಂದು ಅವರು ಅಭಿಪ್ರಾಯಪಟ್ಟರು.

ದೇಶವು ಧ್ರುವೀಕರಣದ ಪರಿಸರದ ಹಿಡಿತಕ್ಕೆ ಸಿಕ್ಕಿರುವಾಗ ಸುಮ್ಮನೆ ಕುಳಿತು ನೋಡುವುದು ತಮ್ಮಿಂದ ಸಾಧ್ಯವಿಲ್ಲ ಎಂದೂ ಅವರು ಹೇಳಿದರು. ಆರ್ಥಿಕ ಸಿದ್ಧಾಂತಗಳು, ಆರ್ಥಿಕ ಪ್ರಗತಿ ನಿಧಾನಗತಿಯಲ್ಲಿರುವುದು ಮತ್ತು ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ವಿಫಲವಾಗಿರುವುದು ಮೊದಲಾಗಿ ಜನರನ್ನು ಗಂಭೀರ ವಿಷಯಗಳಿಂದ ದೂರ ಸರಿಯುವಂತೆ ಮಾಡುವ ಚತುರ ತಂತ್ರವೇ ವಿಭಜನೆಯ ಹಾದಿಯ ರಾಜಕೀಯ. ಇದೇ ಇತ್ತೀಚೆಗೆ ನನ್ನ ಚಿಂತೆಗೆ ಕಾರಣವಾಗಿದೆ ಎಂದು ಪ್ರಣಬ್ ಮುಖರ್ಜೀ ಹೇಳಿದ್ದಾರೆ.

ದೇಶದ ಅತ್ಯುನ್ನತ ಸಂವಿಧಾನ ಪದವಿಯನ್ನು ತೊರೆದ ನಂತರವೂ ತಮ್ಮ ಅಭಿಪ್ರಾಯ ಮತ್ತು ಕಾಳಜಿಗಳನ್ನು ಬಹಿರಂಗಪಡಿಸುವಲ್ಲಿ ಪ್ರಣಬ್ ಮುಖರ್ಜೀ ಹಿಂದೆ ಸರಿದಿಲ್ಲ. ಅಕ್ಟೋಬರ್ 14ರಂದು ಅವರು ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ಸಂಸ್ಥಾಪಕ ಸರ್ ಸೈಯದ್ ಅಹ್ಮದ್ ಖಾನರ ಜನ್ಮದ್ವಿಶತಮಾನದ ಸಂಭ್ರಮಾಚರಣೆ, ನವೆಂಬರಿನಲ್ಲಿ ಕೋಲ್ಕತ್ತಾದ ಇಂದಿರಾಗಾಂಧಿ ಮೆಮೊರಿಯಲ್‍ನಲ್ಲಿ ಬಿದಾನ್ ಟ್ರಸ್ಟ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಡಿಸೆಂಬರಿನಲ್ಲಿ ಜಾಧವಪುರ್ ವಿಶ್ವವಿದ್ಯಾಲಯದಲ್ಲಿ ಮಾತನಾಡಲಿದ್ದಾರೆ.