ಆಟೋ ಪಲ್ಟಿ : ಚಾಲಕ ಪಾರು

ಕಂದಕಕ್ಕೆ ಉರುಳಿದ ಆಟೋ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಚಾಲಕನ ನಿಯಂತ್ರಣ ತಪ್ಪಿದ ಆಟೋ ರಸ್ತೆ ಬದಿಯ ಮನೆಯಂಗಳಕ್ಕೆ ಉರುಳಿದ ಘಟನೆ ಬುಧವಾರ ತಡರಾತ್ರಿ ನಡೆದಿದೆ.

ವಿಟ್ಲ ಸಮೀಪದ ನೆಲ್ಲಿಗುಡ್ಡೆ ನಿವಾಸಿಗೆ ಸೇರಿದ ಆಟೋ ತಡರಾತ್ರಿಯಲ್ಲಿ ಬಾಡಿಗೆ ಹೋಗಿ ಬರುತ್ತಿದ್ದ ಸಂದರ್ಭ ಚಂದಳಿಕೆ ರಸ್ತೆ ಬದಿಯಲ್ಲಿನ ಮನೆಯೊಂದರ ಸುಮಾರು 30 ಅಡಿ ಆಳದ ಅಂಗಳಕ್ಕೆ ಉರುಳಿದೆ. ಅಪಘಾತದ ತೀವ್ರತೆಗೆ ಆಟೋ ಸಂಪೂರ್ಣ ಜಖಂಗೊಂಡಿದ್ದರೂ ಚಾಲಕ ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.