ಶಾಗೆ ಸಮನ್ಸ್

ನರೋಡಾ ಗಾಮ್ ದಂಗೆ ಪ್ರಕರಣ

 ಅಹ್ಮದಾಬಾದ್ : ಹದಿನೈದು ವರ್ಷಗಳ ಹಿಂದಿನ ನರೊಡಾ ಗಾಮ್ ದಂಗೆ ಪ್ರಕರಣ ಸಂಬಂಧ ಜೀವಾವಧಿ ಶಿಕ್ಷೆಗೊಳಗಾಗಿರುವ  ಮಾಜಿ ಗುಜರಾತ್ ಸಚಿವೆ ಹಾಗೂ ಬಿಜೆಪಿ ನಾಯಕಿ ಮಾಯಾ ಕೊಡ್ನಾನಿ ಪರ ಸಾಕ್ಷ್ಯ ನುಡಿಯಲು ಹಾಜರಾಗುವಂತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ 2002ರಲ್ಲಿ ನಡೆದ  ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ  ನ್ಯಾಯಾಲಯ ಮಂಗಳವಾರ ಆದೇಶಿಸಿದೆ.

ಕೊಡ್ನಾನಿ ಅವರು ಈ ಹಿಂದೆ  ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಯಲ್ಲಿ  ದಂಗೆ ನಡೆದ ಸಂದರ್ಭ ತಾನು ಆ ಸ್ಥಳದಲ್ಲಿರಲಿಲ್ಲ ಎಂಬುದನ್ನು ಸಾಕ್ಷ್ಯ ಸಮೇತ ನಿರೂಪಿಸಲು ಶಾ ಮತ್ತಿತರ 13 ಮಂದಿ ಸಾಕ್ಷಿಗಳನ್ನು ಕರೆಸಿಕೊಳ್ಳಲು ಅನುಮತಿ ಕೋರಿದ್ದರು.