ಶೆಣೈಗೆ ಸುಪ್ರೀಂ ನೊಟೀಸ್

ನರೇಶ್ ಶೆಣೈ

ಬಾಳಿಗಾ ಕೊಲೆ ಪ್ರಕರಣ

ಮಂಗಳೂರು : ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಬಾಳಿಗಾ ಅವರ ತಂದೆ ರಾಮಚಂದ್ರ ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ಸ್ವೀಕಾರ ಮಾಡಿರುವ ಸುಪ್ರೀಂಕೋರ್ಟ್, ಆರೋಪಿ ನರೇಶ್ ಶೆಣೈ ಹಾಗೂ ಕರ್ನಾಟಕ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಸೋಮವಾರದಂದು ಸುಪ್ರೀಂ ಕೋರ್ಟಿನಲ್ಲಿ ಅರ್ಜಿದಾರ ರಾಮಚಂದ್ರ ಬಾಳಿಗಾ ಪರ ವಾದ ಮಂಡಿಸಿದ ವಕೀಲರಾದ ನಾಗಮೋಹನ್‍ದಾಸ್, “ಪ್ರಕರಣವು ತನಿಖಾ ಹಂತದಲ್ಲಿರುವ ಸಂದರ್ಭದಲ್ಲಿ ಹೈಕೋರ್ಟ್ ಆರೋಪಿ ನರೇಶ್ ಶೆಣೈಗೆ ಜಾಮೀನು ಮಂಜೂರು ಮಾಡಿದೆ. ಇಂತಹ ಪ್ರಕರಣಗಳಲ್ಲಿ ಜಾಮೀನು ನೀಡಲಾಗುವುದಿಲ್ಲ. ಮಾಹಿತಿ ಹಕ್ಕು ಕಾರ್ಯಕರ್ತ ಬಾಳಿಗಾ ಕೊಲೆ ಪ್ರಕರಣ ಆಗಿರುವುದರಿಂದ ಪ್ರಮುಖ ಆರೋಪಿ ನರೇಶ್ ಶೆಣೈ ಜಾಮೀನು ರದ್ದು ಮಾಡಬೇಕು” ಎಂದು ವಾದಿಸಿದ್ದರು.

ವಾದ ಆಲಿಸಿದ ನ್ಯಾಯಾಲಯವು ಪ್ರಮುಖ ಆರೋಪಿ ಬಾಳಿಗಾ ಹಾಗೂ ಸರಕಾರಕ್ಕೆ ನೊಟೀಸ್ ಜಾರಿ ಮಾಡಿತು ಎಂದು ಬಾಳಿಗಾ ಕುಟುಂಬದ ಪರ ಹೈಕೋರ್ಟ್ ವಕೀಲ ರವೀಂದ್ರನಾಥ ಕಾಮತ್ ತಿಳಿಸಿದ್ದಾರೆ.

ಬಾಳಿಗಾ ಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳ್ಳುವ ಮೊದಲೇ ನರೇಶ್ ಶೆಣೈಯನ್ನು ಹೈಕೋರ್ಟ್ ಜಾಮೀನಿನ ಮೇಲೆ ಬಿಡುಗಡೆಗೊಳಿಸಿತ್ತು.