ರಾಷ್ಟ್ರಪತಿ ಹುದ್ದೆಗೆ ಮುಂದಿನ ವಾರ ಬಿಜೆಪಿ ಆಯ್ಕೆ ಪ್ರಕಟ

ನವದೆಹಲಿ : ತಾನು ಆಯ್ಕೆ ಮಾಡಿದ ರಾಷ್ಟ್ರಪತಿ ಅಭ್ಯರ್ಥಿಯ ಹೆಸರನ್ನು ಬಿಜೆಪಿ ಮುಂದಿನ ವಾರ ವಿಪಕ್ಷಗಳ ಗಮನಕ್ಕೆ ತರುವುದಾಗಿ ಬಿಜೆಪಿ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಹಿರಿಯ ನಾಯಕರುಗಳು  ವಿಪಕ್ಷಗಳು ಮತ್ತು ಇತರ ಪಕ್ಷಗಳೊಡನೆ ನಡೆಸಿದ ಮಾತುಕತೆಗಳ ಆಧಾರದ ಮೇಲೆ  ಹೆಸರನ್ನು ಅಂತಿಮಗೊಳಿಸಿದ ನಂತರ ಮೇಲಿನ ಪ್ರಕ್ರಿಯೆ ನಡೆಯುವುದು.  ವಿಪಕ್ಷಗಳ ಜತೆ ನಡೆದ ಪ್ರಥಮ ಸಭೆಯಲ್ಲಿ ಯಾವುದೇ ್ನ ಹೆಸರುಗಳನು ಸೂಚಿಸಲಾಗಿರಲಿಲ್ಲವೆಂದು ಕಾಂಗ್ರೆಸ್ ಹಾಗೂ ಎಡ ಪಕ್ಷಗಳ ನಾಯಕರು ದೂರಿದ್ದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ವಿಪಕ್ಷಗಳ ಅಭಿಪ್ರಾಯ ಕೋರಿ ಯಾವುದೇ ಹೆಸರುಗಳನ್ನು ಮುಂದಿಟ್ಟಿಲ್ಲವಾದುದರಿಂದ ಬಿಜೆಪಿ ಕೂಡ ಹಾಗೆಯೇ ಮಾಡಬೇಕೆಂದೇನಿಲ್ಲ, ವಿಪಕ್ಷಗಳ ಮನಸ್ಸಿನಲ್ಲೇನಿದೆ ಎಂಬುದನ್ನು ಅರಿಯಲು ಪಕ್ಷದ ಯತ್ನಿಸಿದೆ ಎಂದು ಕೆಲ ಬಿಜೆಪಿ ನಾಯಕರುಗಳು ಹೇಳಿಕೊಂಡಿದ್ದಾರೆ.