ನಳಿನರಿಂದ ದ್ವಂದ್ವ ಹೇಳಿಕೆ ಯಾಕೆ

ಒಂದು ಕಡೆ  ಎತ್ತಿನಹೊಳೆ ಯೋಜನೆಗೆ ಬಿಜೆಪಿ ಪಕ್ಷದ ಸಂಪೂರ್ಣ ಬೆಂಬಲವಿದೆ ಈ ಯೋಜನೆಯನ್ನು ಮಂಜೂರು ಮಾಡಿದ್ದೇ ನಾನು ಎಂದು ರಾಜ್ಯಾಧ್ಯಕ್ಷ ಬಿ ಎಸ್ ಯಡ್ಡಿಯೂರಪ್ಪ ಘಂಟಾಘೋಷವಾಗಿ ಹೇಳುತ್ತಿರುವಾಗ ನಳಿನಕುಮಾರ್ ಯಾಕೆ ದ್ವಂದ್ವ ಹೇಳಿಕೆ ಕೊಟ್ಟು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುವುದು   ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲವೇ  ಇಲ್ಲಿನ ಜನರ ಮತ ಬೇಡವೇ   ನಿಮ್ಮ ಹೇಳಿಕೆ ದ್ವಂದ್ವ ಆಗಿಲ್ಲದಿದ್ದರೆ ಯಡಿಯೂರಪ್ಪರು ಹೇಳುತ್ತಿರುವುದು ಸುಳ್ಳೇ  ಹಾಗೊಂದು ವೇಳೆ ನಳಿನಗೆ ದ ಕ ಜಿಲ್ಲೆ ಜನರ ಮೇಲೆ ಆಪಾರ ಪ್ರೀತಿಯಿದ್ದರೆ ರಾಜ್ಯ ಬಿಜೆಪಿ ನಿಲುವನ್ನು ಬಹಿರಂಗವಾಗಿ ವಿರೋಧಿಸಿ  ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷಾತೀತ ಹೋರಾಟ ಮಾಡಿ  ಆಗಲಾದರೂ ಜನ ನಿಮ್ಮನ್ನು ನಂಬಬಹುದೇನೋ  ಅದು ಬಿಟ್ಟು ಎತ್ತಿನಹೊಳೆಗೆ ಬಿಜೆಪಿ ರಾಜ್ಯಾಧ್ಯಕ್ಷರದೇ ಬೆಂಬಲವಿರುವಾಗ ನೀವು ಒಬ್ಬರು ದ್ವಂದ್ವ ಹೇಳಿಕೆ ಕೊಟ್ಟು ಜನರನ್ನು ಯಾಕೆ ಮಂಗ ಮಾಡುತ್ತಿದ್ದೀರಿ  ಅದೂ ಈ ಕಾಲ ಕಾಲದಲ್ಲಿ

  • ಎಂ ಸುಕೇಶ್ ಸುವರ್ಣ  ಕಟೀಲು