ನಳಿನ್ ಹೇಳಿಕೆಯಿಂದ ಆವರಿಸಿದ ಆತಂಕ

ಸಂಸದ ನಳಿನಕುಮಾರ್ ಕಟೀಲ್ ಕೊಣಾಜೆಯಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣ ಸಂಬಂಧಿಸಿ ಮಾಡಿದ ಬಹಿರಂಗ ಭಾಷಣವು ಅತ್ಯಂತ ಪ್ರಚೋದನಕಾರಿ ಮತ್ತು ಆಕ್ಷೇಪಾರ್ಹವಾಗಿದೆ  ಇದು ಇಡೀ ಜಿಲ್ಲೆಯ ಜನತೆಯನ್ನು ಕಳವಳ ಮತ್ತು ಆತಂಕಕ್ಕೀಡು ಮಾಡಿದೆ  ಕಾಂಗ್ರೆಸ್ ಪಕ್ಷವು ಉಗ್ರವಾಗಿ ಇದನ್ನು ಖಂಡಿಸುತ್ತದೆ
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಅಸ್ತಿತ್ವಕ್ಕೆ ಬಂದ ನಂತರ ಜಿಲ್ಲೆಯಲ್ಲಿ ನೆಲೆಸಿದ ಶಾಂತಿ  ಸಾಮರಸ್ಯದ ವಾತಾವರಣವನ್ನು ಸಹಿಸದ ಸಂಘ ಪರಿವಾರವು ಒಂದಿಲ್ಲೊಂದು ಕಾರಣವನ್ನು ಸೃಷ್ಟಿಸಿ ಸಮಾಜ ಸ್ವಾಸ್ಥ್ಯವನ್ನು ಕೆಡಿಸುವ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದೆ  ಈಗ ಸಂಸದರೇ  ಜಿಲ್ಲೆಗೆ ಬೆಂಕಿ ಹಚ್ಚಲು ಸಿದ್ಧ  ಎಂಬ ರೀತಿಯಲ್ಲಿ ಮಾತನಾಡಿದ್ದು ಸಂಘ ಪರಿವಾರದ ಗುಪ್ತ ಅಜೆಂಡಾವನ್ನು ಸಾರಿಸಾರಿ ಹೇಳುತ್ತಿದೆ  ಓರ್ವ ಸಂಸದರಿಗೆ ಶೋಭೆ  ಘನತೆ ತರದಂತಹ ಹೇಳಿಕೆಯನ್ನು ಕೂಡಲೇ ಹಿಂತೆಗೆದು ಜಿಲ್ಲೆಯ ಜನತೆಯ ಹತ್ತಿರ ಕ್ಷಮೆಯಾಚಿಸಬೇಕೆಂದು ಈ ಮೂಲಕ ಆಗ್ರಹಿಸುತ್ತಿದ್ದೇವೆ
ಮಾಜಿ ಸಂಸದರಾದ ರಮ್ಯರವರು ಜಿಲ್ಲೆಯನ್ನು ಕಾಡುತ್ತಿರುವ ಧಾರ್ಮಿಕ ಅಸಹಿಷ್ಣುತೆಯ ಬಗ್ಗೆ ವಿಮರ್ಶೆ ಮಾಡಿದಾಗ ಬಿಜೆಪಿ ಪಕ್ಷವು ಅದನ್ನು ಒಂದು ದೊಡ್ಡ ವಿವಾದವನ್ನೇ ಮಾಡಿದೆ  ಈಗ ಆ ಪಕ್ಷದ ಸಂಸದರೇ ಭಯೋತ್ಪಾದಕತೆಯನ್ನುಂಟು ಮಾಡುವ ರೀತಿಯ ಭಾಷಣವನ್ನು ಮಾಡಿದ್ದಾರೆ  ರಾಷ್ಟ್ರೀಯ ಪಕ್ಷವಾದ ಬಿಜೆಪಿಯು ಇದಕ್ಕೆ ಉತ್ತರ ನೀಡಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ

ಪಿ ವಿ ಮೋಹನ್
ಕಾಂಗ್ರೆಸ್ ವಕ್ತಾರ  ಮಂಗಳೂರು