ನಳಿನಕುಮಾರಗೆ ವಿಪರೀತ ಬುದ್ಧಿ

ವಿನಾಶಕಾಲ ಎಂದು ಎನ್ನುವುದೇ ಪ್ರಶ್ನೆ

ಹಿಂದೆ ಒಬ್ಬ ಮನೆಯಲ್ಲಿ ಮಲಗಿರುವಾಗ ಆತನಿಗೆ ತಿಗಣೆ ಕಚ್ಚಿತಂತೆ  ಆಗ ಆತ ಆ ತಿಗಣೆಯನ್ನು ಕೊಂದು ಬಿಡುವೆ ಎಂದು ಸಂಪೂರ್ಣ ಹಾಸಿಗೆಯನ್ನು ಹುಡುಕಿದರೂ ಅದು ಸಿಗಲಿಲ್ಲವಂತೆ  ಸಿಟ್ಟಿಗೆದ್ದ ಆತ ಹಾಸಿಗೆಗೆ ಬೆಂಕಿ ಇಡಲು ಹೊರಟಾಗ ಆತನ ಬುದ್ದಿವಂತ ಹೆಂಡತಿ  ಅದನ್ನು ಬಿಸಿಲಲ್ಲಿ ಹಾಕಿ  ಆಗ ತಿಗಣೆ ಓಡಿ ಹೋಗುತ್ತದೆ ಎಂದು ಆತನಿಗೆ ಬುದ್ದಿ ಹೇಳಿದಳಂತೆ  ನಂತರವೂ ಕೂಡ ತಿಗಣೆ ಕಾಟ ಕಮ್ಮಿಯಾಗದಾಗ ಆತ ಮಂಚಕ್ಕೆ ಬೆಂಕಿ ಇಡುವೆ ಎಂದನಂತೆ  ಆಗಲೂ ಹೆಂಡತಿ ಮಂಚಕ್ಕೆ ತಿಗಣೆ ಬಾರದಂತೆ ಪೇಟೆಯಲ್ಲಿ ಮದ್ದು ಸಿಗುತ್ತದೆ ಅದನ್ನು ತಂದು ಸಿಂಪಡಿಸಿ ಎಂದಳಂತೆ  ಆಗಲೂ ತಿಗಣೆ ಕಾಟ ಕಮ್ಮಿಯಾಗದಾಗ ನಾನು ಇಡೀ ಮನೇಗೆ ಬೆಂಕಿ ಇಡುತ್ತೇನೆ ಎಂದನಂತೆ  ಆಗ ಹೆಂಡತಿ ಉಳಿದ ಮದ್ದನ್ನು ಮನೆಯ ಸಂದುಗಳಿಗೆ ಸಿಂಪಡಿಸಿ ಎಂದಳಂತೆ  ನಂತರ ತಿಗಣೆ ಕಾಟ ಕಡಿಮೆಯಾಯಿತಂತೆ
ಇದನೆಲ್ಲಾ ನೋಡುತ್ತಿದ್ದ ಅತ್ತೆ ಮಗನಲ್ಲಿ  ನಿನಗೆ ಬುದ್ದಿಯಂತೂ ಇಲ್ಲಾ  ಕನಿಷ್ಟ ತಾಳ್ಮೆಯನ್ನಾದರೂ ಬೆಳೆಸಿಕೋ  ಎಂದು ಬುದ್ದಿವಾದ ಹೇಳಿದಳಂತೆ  ರಾಷ್ಟ್ರೀಯ ಪಕ್ಷವೊಂದರ ಅತ್ತೆಯಂದಿರಂಥ ಮನಸ್ಸುಳ್ಳ ಮುತ್ಸದಿಗಳು ಕನಿಷ್ಟ ಬುದ್ದಿಮಾತು ಹೇಳುವಂತಹ ದೆರ್ಯವನ್ನಾದರೂ ಬೆಳೆಸಿಕೊಳ್ಳಬೇಕು

ಸತ್ಯರಾಜ್  ಪುತ್ತೂರು