ವಾರ್ತೆ ಸೋಗಿನಲ್ಲಿ ಪ್ರಚಾರ ಕಾರ್ಯ : ಸುದ್ದಿ ವಾಹಿನಿಗಳಿಗೆ ನಾಯ್ಡು ಎಚ್ಚರಿಕೆ

ನವದೆಹಲಿ : ಪ್ರಸಾರವಾಗುವ ವಾರ್ತೆಗಳ ಸೋಗಿನಲ್ಲಿ ವಿವಿಧ ಸಂಸ್ಥೆಗಳನ್ನು ಪ್ರಚುರಪಡಿಸುವ ಕಾರ್ಯಕ್ರಮಗಳನ್ನು  ಪ್ರಸಾರ ಮಾಡುವುದರ ವಿರುದ್ಧ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸುದ್ದಿ ವಾಹಿನಿಗಳಿಗೆ ಎಚ್ಚರಿಕೆ ನೀಡಿದೆ. “ಕೆಲ ಟಿವಿ ಚಾನಲ್ಲುಗಳು  ಸುದ್ದಿಯ ಸೋಗಿನಲ್ಲಿ ವಿವಿಧ ಶಿಕ್ಷಣ/ಹಣಕಾಸು ಹಾಗೂ ವೈದ್ಯಕೀಯ ಸಂಸ್ಥೆಗಳನ್ನು ಪ್ರಚುರಪಡಿಸುವ  ಜಾಹೀರಾತುಗಳು/ಪ್ರಚಾರ ಕಾರ್ಯಕ್ರಮಗಗಳನ್ನು ವಾರ್ತೆಗಳ ರೂಪದಲ್ಲಿ  ಪ್ರಸಾರ ಮಾಡಿ ವೀಕ್ಷಕರನ್ನು  ದಾರಿತಪ್ಪಿಸುತ್ತಿವೆಯೆಂಬುದು ನಮ್ಮ ಗಮನಕ್ಕೆ ಬಂದಿದೆ” ಎಂದು ವಾತಾ ಮಂತ್ರಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.