ನಾಗರಪಂಚಮಿ ಆಚರಣೆ ನಾನು ಕಂಡ ಅವ್ಯವಸ್ಥೆಗಳು

ನಾಡಿನಾದ್ಯಂತ ನಾಗರಪಂಚಮಿ ನಾಗದೇವರಿಗೆ ತನು-ತಂಬಿಲ ಅರ್ಪಿಸುವ ಅತೀ ಪವಿತ್ರವಾಗಿರುವ ವರ್ಷಕ್ಕೊಮ್ಮೆ ಶ್ರಾವಣ ಮಾಸದ ಶುಕ್ಲಪಕ್ಷದಲ್ಲಿ ಬರುವ ಪಂಚಮಿಯಂದು ನಡೆಯುವ ಕಾರ್ಯಕ್ರಮ ನಡೆದಿದೆ ಈ ವರ್ಷ ಜುಲೈ 27 ಮತ್ತು 28ರಂದು ಎರಡು ದಿನಗಳಲ್ಲಿ ಪಂಚಮಿ ತಿಥಿ ಬಂದಿದೆ ಈ ವರ್ಷ ಹಲವಾರು ನಾಗಬನಗಳಿಗೆ ಹೋದಾಗ ಭಕ್ತರು ಅನುಭವಿಸುತ್ತಿರುವ ಹೇಳಿಕೊಳ್ಳಲಾಗದ ವಿಷಯಗಳನ್ನು ನೋಡಿ ಬಹಳ ಬೇಸರವಾಯಿತು ಸಾಕ್ಷಾತ್ ವಿಷ್ಣು ದೇವರೇ ಆದೇಶಿಸಿರುವ ಈ ಪೂಜಾ ಕ್ರಮದ ಆಚರಣೆಯ ಹಿಂದೆ ಅದೆಷ್ಟು ಜನ ಯಾತನೆ ಅನುಭವಿಸುತ್ತಿದ್ದಾರೆಂದು ನಿಮಗೆ ಗೊತ್ತಿದೆಯೇ ಇದಕ್ಕೆ ಏನಾದರೂ ಪರಿಹಾರವಿದೆಯೇ ತೀರ್ಥಹಳ್ಳಿಯಿಂದ ಬಂದ ಭಕ್ತರ ಗುಂಪು ಅರ್ಚಕರಿಲ್ಲದೆ ಹಾಗೆಯೇ ಹಿಂತಿರುಗಬೇಕಾಗಿ ಬಂತು ಅಂದರೆ ಮೂಲ ನಾಗನಿಗೆ ಅರ್ಪಿಸಬೇಕೆಂಬ ತತ್ವ ಇಲ್ಲಿ ಇರುವುದರಿಂದ ಅದೆಷ್ಟೋ ಭಕ್ತರು ಈ ವರ್ಷ ಸರಿಯಾದ ಮಾಹಿತಿಯ ಕೊರತೆಯಿಂದ ಕಷ್ಟ ಅನುಭವಿಸಿದರು ಕೆಲವೊಂದು ಕಡೆಯಲ್ಲಿ ಬೆಳಿಗ್ಗೆ 7 ಗಂಟೆಗೆ ಬಂದ ಭಕ್ತರು 5 ಗಂಟೆಯವರೆಗೆ ಉಪವಾಸ ಅನುಭವಿಸುತ್ತಾ ಅರ್ಚಕರಿಗಾಗಿ ಕಾದು ಕುಳಿತದ್ದು ಕಂಡುಬಂತು ಇಲ್ಲಿ ನಾವೆಲ್ಲರೂ ಸಮಾನ ಮನಸ್ಕರಾಗಿ ಯೋಚಿಸಬೇಕಾದ ಅನಿವಾರ್ಯತೆ ಇದೆ ಅತೀ ಪವಿತ್ರವಾಗಿರುವ ಈ ಕಾರ್ಯಕ್ರಮ ಸಂತೋಷದಿಂದ ಆಚರಿಸಿಕೊಳ್ಳಬೇಕಾಗಿದೆ ಎಲ್ಲರಲ್ಲಿಯೂ ನಾಗದೇವರೆಂದರೆ ಏನೋ ಭಯವಿದೆ. ಅರ್ಚಕರಿಗೆ ಮಾತಾಡಿದರೆ ಏನಾದರೂ ತೊಂದರೆಯಾದೀತು ಎಂಬ ಭಯ ಹಾಗಾದರೆ ನಾವು ಏನು ಮಾಡಬಹುದು ಎಂದು ಯೋಚಿಸಿ ಯಾವುದೇ ಪೂಜೆ ಮಧ್ಯಾಹ್ನ 12.30ರೊಳಗೆ ಆಗಬೇಕು ಯಾಕೆಂದರೆ ನಂತರ ನೀವು ತಂದಿರುವ ಹಾಲು ಹಾಳಾಗುತ್ತಾ ಬರುತ್ತದೆ ನಮಗೆ ಹೇಗೆ ಮಧ್ಯಾಹ್ನ ಊಟ ಮುಖ್ಯವೋ ಹಾಗೆಯೇ ದೇವರಿಗೂ ಮಧ್ಯಾಹ್ನದ ಒಳಗೆ ಪೂಜೆ ಆಗಬೇಕು ಆಗ ಯಾವುದೇ ಯಜಮಾನ ವರ್ಗ ಹಾಗೂ ಇತರ ಸದಸ್ಯರಿಗೆ ಹಸಿವಿನ ಬಾಧೆ ತಟ್ಟುವುದಿಲ್ಲ ಬರುವ ಭಕ್ತರಿಗೆ ಸರಿಯಾದ ಮಾಹಿತಿ ಪತ್ರಿಕಾ ಪ್ರಕಟಣೆ ಅಥವಾ ಫ್ಲೆಕ್ಸ್ ಮೂಲಕ ಹಿಂದಿನ ದಿನವೇ ಪ್ರಕಟಿಸಬೇಕು ಕೆಲ ಅರ್ಚಕರಿಗೆ ಇಡೀ ಗ್ರಾಮದ ನಾಗಬನಗಳು ಅವರಿಗೇ ಸೇರಿದ್ದು. ಅವರೇ ಬರಬೇಕೆಂಬ ಕಟ್ಟಪ್ಪಣೆ ಇರುತ್ತದೆ ಇರಲಿ ಬಿಡಿ ಅವರು ಇತರ ಅರ್ಚಕರ ಸಹಾಯದಿಂದ ಸರಿಯಾದ ವೇಳೆಗೆ ಪೂಜೆ ನಡೆಯುವಂತೆ ನೋಡಿಕೊಳ್ಳಬೇಕು ಒಂದು ಕಡೆ ಮೊನ್ನೆ ಮುಸ್ಸಂಜೆ 6 ಗಂಟೆಗೆ ಪೂಜೆ ಆಗುತ್ತಿತ್ತು ಒಮ್ಮೆ ಯೋಚಿಸಿ ಅಷ್ಟು ಮಂದಿ ಭಕ್ತರ ಹಸಿವಿನ ಸ್ಥಿತಿ ಹೇಗಿರಬಹುದು ಇದು ಒಂದು ರೀತಿಯ ಶೋಷಣೆ ಎಂದು ನಿಮಗನಿಸುವುದಿಲ್ಲವೇ ಅದು ಹಾಲಿನ ಅಭಿಷೇಕವೇ ಮೊಸರಿನ ಅಭಿಷೇಕವೇ ಎಂದು ನೀವೇ ಊಹಿಸಿರಿ ಈ ಬರಹದ ಉದ್ದೇಶವಿಷ್ಟೇ ಎಲ್ಲರೂ ಭಕ್ತಿಯಿಂದ ಸಂತೋಷದಿಂದ ಈ ಪವಿತ್ರ ಆಚರಣೆ ಆಚರಿಸುವಂತಾಗಲಿ ಯಾರಿಗೂ ಶೋಷಣೆಯಾಗುವಂತಾಗಬಾರದು

  • ಕೆ ಸುಬ್ರಹ್ಮಣ್ಯ ಆಚಾರ್ಯ  ಶ್ರೀ ಕಾರಿಂಜೇಶ್ವರ

ಜ್ಯೋತಿಷ್ಯಾಲಯ ಹಿರಿಯಂಗಡಿ  ಕಾರ್ಕಳ