ಫೆ 21ಕ್ಕೆ ಮಾಣಿಲದಲ್ಲಿ ನಾಗಮಂಡಲೋತ್ಸವ

ಮಂಗಳೂರು : ಬಂಟ್ಬಾಳ ತಾಲೂಕಿನ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರ ಶ್ರೀ ಧಾಮ ಮಾಣಿಲ ಕ್ಷೇತ್ರದಲ್ಲಿ ಮೋಹನದಾಸ ಪರಮಹಂಸ ಸ್ವಾಮಿ ಮಾರ್ಗದರ್ಶನದಲ್ಲಿ ಫೆಬ್ರವರಿ 19 ಸೋಮವಾರ ಶ್ರೀನಿವಾಸ ಕಲ್ಯಾಣೋತ್ಸವ, ಪ್ರತಿಷ್ಠಾ ವರ್ಧತ್ಯುತ್ಸವ ಫೆಬ್ರವರಿ 20, ಮಂಗಳವಾರ, ಫೆಬ್ರವರಿ 31 ಬುಧವಾರ ಅಷ್ಟಪವಿತ್ರ ನಾಗಮಂಡಲೋತ್ಸವ, ಫೆಬ್ರವರಿ 23 ಶುಕ್ರ್ರವಾರ ಶ್ರೀ ದೈವಗಳ ನೇಮೋತ್ಸವ, ಫೆಬ್ರವರಿ 25 ಆದಿತ್ಯವಾರ ಯಕ್ಷಗಾನ ಬಯಲಾಟ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ.

ಫೆಬ್ರವರಿ 21ರಂದು ಬುಧವಾರ ಅಷ್ಟಪವಿತ್ರ ನಾಗಮಂಡಲೋತ್ಸವವು ನಾಗಪಾತ್ರಿ ಪೆರ್ಡೂರು ಶ್ರೀ ಕ್ಷೇತ್ರ ಕಲ್ಲಂಗಲದ ವೇದಮೂರ್ತಿ ರಾಮಚಂದ್ರ ಕುಂಜಿತ್ತಾಯರ ನೇತೃತ್ವದಲ್ಲಿ ಹಾಗೂ ನಾಗಕನ್ನಿಕೆಯರಾಗಿ ಶ್ರೀ ಮುದ್ದೂರು ಕೃಷ್ಣಪ್ರಸಾದ್ ವೈದ್ಯ ಮತ್ತು ಶ್ರೀ ಬಾಲಕೃಷ್ಣ ವೈದ್ಯ ಮತ್ತು ನಟರಾಜ್ಯ ವೈದ್ಯ ಬಳಗದವರಿಂದ. ಮಧ್ಯಾಹ್ನ 12ಕ್ಕೆ ಪಲ್ಲಪೂಜೆ, ಪ್ರಸನ್ನಪೂಜೆ, ಬ್ರಾಹ್ಮಣ ಸುವಾಸಿನಿ ಸಂತರ್ಪಣೆ, ಮಹಾ ಭೂರಿ ಸಂತರ್ಪಣೆ. 11ಕ್ಕೆ ಹಾಲಿಟ್ಟು ಸೇವೆ. ತದನಂತರ ನಾಗಮಂಡಲ ಸೇವೆ ನಡೆದು ಪ್ರಸಾದ ವಿತರಣೆ ನಡೆಯಲಿದೆ ಎಂದು ಶ್ರೀ ಮಹಾಲಕ್ಷ್ಮೀ ಕ್ಷೇತ್ರ ಮಾಣಿಲ ದೇವಳ ಪ್ರಕಟಣೆ ತಿಳಿಸಿದೆ.

 

 

LEAVE A REPLY