ಸಾಂಸ್ಕøತಿಕ ಉತ್ಸವದ ಮೂಲಕ ಜನರ ಮನಸ್ಸನ್ನು ಕಟ್ಟುವ ಕೆಲಸ ಆಳ್ವಾಸ್ ವಿರಾಸತಿನಲ್ಲಿ ನಡೆಯುತ್ತಿದೆ

ರಾಜ್ಯಪಾಲ ಪಿ ಬಿ ಆಚಾರ್ಯ

ಮೂಡಬಿದ್ರೆ : ಭಾರತವನ್ನು ಕಟ್ಟುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಹಿರಿದಾಗಿದೆ ಎಂದು ನಾಗಾಲ್ಯಾಂಡ್ ರಾಜ್ಯಪಾಲ ಪಿ ಬಿ ಆಚಾರ್ಯ ಹೇಳಿದರು.

ಪುತ್ತಿಗೆ ವಿವೇಕಾನಂದ ನಗರದ ವನಜಾಕ್ಷಿ ಕೆ ಶ್ರೀಪತಿ ಭಟ್ ವೇದಿಕೆಯಲ್ಲಿ ಜನವರಿ 14ರವರೆಗೆ ನಡೆಯಲಿರುವ 24ನೇ ವರ್ಷದ ಆಳ್ವಾಸ್-ವಿರಾಸತ್ ರಾಷ್ಟ್ರೀಯ ಸಾಂಸ್ಕøತಿಕ ಉತ್ಸವ ಉದ್ಘಾಟಿಸಿ ಮಾತನಾಡಿದ ನಂತರ ಪದ್ಮಭೂಷಣ ಪಂಡಿತ್ ರಾಜನ್ ಸಾಜನ್ ಮಿಶ್ರಾರಿಗೆ ಆಳ್ವಾಸ್ ವಿರಾಸತ್-2018 ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಸಾಂಸ್ಕøತಿಕ ಉತ್ಸವದ ಮೂಲಕ ಜನರ ಮನಸ್ಸನ್ನು ಕಟ್ಟುವ ಕೆಲಸ ಆಳ್ವಾಸ್ ವಿರಾಸತ್ ಮೂಲಕ ನಡೆಯುತ್ತಿದೆ. ಭಾರತ ವಿಶ್ವದಲ್ಲಿಯೇ ಸಮೃದ್ಧವಾದ ಸಾಂಸ್ಕøತಿಕ ಹಿರಿಮೆ ಹೊಂದಿರುವ ದೇಶ. ಈ ಹಿರಿಮೆಯನ್ನು ಉಳಿಸಿಕೊಳ್ಳಬೇಕಿದೆ. ನಮ್ಮ ಪಠ್ಯದಲ್ಲಿ ಈ ಬಗ್ಗೆ ವಿಷಯ ಸೇರ್ಪಡೆಗೊಳಿಸಬೇಕಿದೆ. ದೇಶದ ಎಲ್ಲಾ ರಾಜ್ಯಗಳನ್ನು ಸಮಾನತೆಯಿಂದ ನೋಡಬೇಕಿದೆ. ಆದರೆ ನಾನಾ ಕಾರಣದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ಈಶಾನ್ಯ ಭಾರತದ ಅಭಿವೃದ್ಧಿ ಬಗ್ಗೆ ದೇಶದಲ್ಲಿ ಶೈಕ್ಷಣಿಕ ಆರ್ಥಿಕವಾಗಿ ಮುಂದುವರಿದಿರುವ ರಾಜ್ಯಗಳು ಅಲ್ಲಿನ ಶಿಕ್ಷಣ ಸಂಸ್ಥೆಗಳು ಗಮನಹರಿಸಿ ಅಲ್ಲಿನ ಅಭಿವೃದ್ಧಿಗೆ ಸಹಾಯ ನೀಡಬೇಕಿದೆ. ಶೈಕ್ಷಣಿಕ ಕೇಂದ್ರಗಳು ಅಭಿವೃದ್ಧಿಯ ಕೇಂದ್ರಗಳು ಆಗಬೇಕಿದೆ. ವಿದ್ಯಾರ್ಥಿಗಳು ಕೇಂದ್ರ, ರಾಜ್ಯದ ಅಭಿವೃದ್ಧಿ ಯೋಜನೆಗಳ ಕೊಂಡಿಯಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಆಚಾರ್ಯ ತಿಳಿಸಿದರು.

ಸಮಾರಂಭದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ರಾಜ್ಯಪಾಲರ ಪತ್ನಿ ಕವಿತಾ ಆಚಾರ್ಯ, ಸಂಸದ ನಳಿನ್, ಶಾಸಕ ಅಭಯಚಂದ್ರ, ಗ್ರಾ ಪಂ ಅಧ್ಯಕ್ಷೆ ಮೋಹಿನಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

 

 

LEAVE A REPLY